ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಭೋಗಸ್ ಮತದಾರರಿದ್ದಾರೆ ಎಂದು ಬಿಜೆಪಿ ಮುಖಂಡ ಅನೀಲ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಸಾಯಿ ಗಲ್ಲಿಯ ಸಿಟಿ ಸರ್ವೆ ನಂ 2338 ಮನೆಯಲ್ಲಿ 189 ಭಾಗಗಳನ್ನು ಮಾಡಿ ಇದೇ ಸರ್ವೇ ನಂಬರ ಬಳಿಸಿ 389 ಜನ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಆದರೆ ಆ ಮನೆ ಬಿದ್ದು ಹೋಗಿದೆ ಆದರೂ ಈ ಮನೆಯ ಸರ್ವೆ ನಂಬರ್ ನಲ್ಲಿ 389 ಜನ ವಾಸವಾಗಿದ್ದಾರೆ ಎಂದು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಅನ್ನೋದು ಅನೀಲ ಬೆನಕೆ ಅವರ ಆರೋಪವಾಗಿದೆ
ಜಿಲ್ಲೆಯ ಕೆಲವು ಹಿರಿಯ ಅಧಿಕಾರಿಗಳಾದ ಔರಾದಕರ,ಏಕರೂಪ ಕೌರ ಸೇರಿದಂತೆ ಹಲವಾರು ಜನ ಅಧಿಕಾರಿಗಳು ಬೆಳಗಾವಿ ಜಿಲ್ಲೆಯಿಂದ ವರ್ಗಾವಣೆಯಾಗಿ ವರ್ಷಗಳೇ ಗತಿಸಿದರೂ ಅವರ ಹೆಸರುಗಳು ಇನ್ನುವರೆಗೆ ಮತದಾರರ ಪಟ್ಟಿಯಲ್ಲಿವೆ ಎಂದು ಬೆನಕೆ ಆರೋಪಿಸಿದರು
ಚುನಾವಣೆ ಸಮೀಪ ಬಂದಂತೆ ಬೆಳಗಾವಿ ಉತ್ತರದಲ್ಲಿ ಚುನಾವಣೆಯ ಸ್ಟಂಟ್ ನಡೆಯುತ್ತಿದೆ ಕೆಲವು ಪ್ರಭಾವಿಗಳು ಮತದಾರರ ಪಟ್ಟಿಯಲ್ಲಿ ಭೋಗಸ್ ಹೆಸರುಗಳನ್ನು ಉಳಿಸಿಕೊಂಡು ಅದನ್ನು ಚುನಾವಣೆಯಲ್ಲಿ ದುರುಪಯೋಗ ಮಾಡಿಕೊಳ್ಳುವ ತಂತ್ರ ರೂಪಿಸಿದ್ದು ಜಿಲ್ಲಾಧಿಕಾರಿ ಎನ್ ಜೈರಾಮ ಅವರು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಭೋಗಸ್ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಅಂತ ಅನೀಲ ಬೆನಕೆ ಒತ್ತಾಯಿಸಿದ್ದಾರೆ