ಬೆಳಗಾವಿ:
ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಕಾರ್ಯಕರ್ತರು ಪಾಲಿಕೆ ಮಹಾಪೌರ ಸಂಜೋತಾ ಬಾಂದೇಕರಗೆ ಮಂಗಳವಾರ ಮನವಿ ಸಲ್ಲಿಸಿದರು.
ನಗರದಲ್ಲಿ ಶಾಹು ಮಹಾರಾಜರ ಪ್ರತಿಮೆ ಅಳವಡಿಸಲಾಗುವುದು ಎಂದು ಈ ಹಿಂದೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿವರೆಗೆ ಅನುಷ್ಠಾನ ಮಾಡುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಶಾಹು ಮಹಾರಾಜರು 100 ವರ್ಷದ ಹಿಂದೆ ಬಡ ಮಕ್ಕಳಿಗೆ ಶಾಲೆ ಕಲಿಸಿದ್ದಾರೆ. ಸರ್ವಧರ್ಮದ ಜನರನ್ನು ಎಲ್ಲರೂ ಒಂದೇ ಎಂದು ಸಮಾಜದಲ್ಲಿ ಕೆಲಸ ಮಾಡಿದ ವ್ಯಕ್ತಿಯ ಬಗ್ಗೆ ಇಂದಿನ ಯುವಕರಿಗೆ ತಿಳಿಯಬೇಕು. ಆದ್ದರಿಂದ ಅವರ ಪ್ರತಿಮೆಯನ್ನು ನಗರದ ಮುಖ್ಯ ವೃತ್ತದಲ್ಲಿ ಅಳವಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನೀಲ ಬೆನಕೆ, ಕಿಸನ ಯಳ್ಳೂರಕರ, ಸುಧೀರ್ ಚವ್ವಾನ, ಎ.ಎಂ.ಪಾಟೀಲ, ಕಿಶೋರ ಲಗಾಡೆ, ಪ್ರೀತಿ ಬಿ, ನಮ್ರತ ಉಂಡ್ರೆ, ರುಕ್ಮೀನಿ ಹಿಡಕಲ, ಲಕ್ಷ್ಮೀ ಹಿಡಕಲ ಸೇರಿದಂತೆ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.