ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ

ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ

ಬೆಳಗಾವಿ-ಪ್ರಸಕ್ತ ಸಾಲಿನ ಅನಿಲ ಬೆನಕೆ ಕ್ರಿಕೆಟ್ ಪಂದ್ಯಾವಳಿಯನ್ನು ಕಾರಂಜಿಮಠದ ಶ್ರೀಗಳು ಉದ್ಘಾಟಿಸಿದರು
ಸ್ಟಂಪ್ ಗಳಿಗೆ ಪೂಜೆ ನೆರವೇರಿಸಿ ಶಾಂತಿಯ ಸಂಕೇತವಾಗಿರುವ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು
ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಗಳು ಬೆಳಗಾವಿಯಲ್ಲಿ ನಡೆಯುತ್ತಿರುವ ಅನೀಲ ಬೆನಕೆ ಕ್ರಿಕೆಟ್ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ ಕ್ರಿಡಾಪಟುಗಳು ಈ ಪಂದ್ಯಾವಳಿಯ ಸದುಪಯೋಗ ಪಡಿಸಿಕೊಂಡು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಬೇಕು ಸತತ ಪರಿಶ್ರಮದಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿ ಹೊರಹೊಮ್ಮಬೇಕು ಎಂದರು
ಪಂದ್ಯಾವಳಿಯ ರೂವಾರಿ ಅನೀಲ ಬೆನಕೆ ಮಾತನಾಡಿ ಈ ವರ್ಷದ ಪಂದ್ಯಾವಳಿಯಲ್ಲಿ ನಲವತ್ತು ತಂಡಗಳು ಭಾಗವಹಿಸುತ್ತಿವೆ ಅಂತಿಮ ಪಂದ್ಯ ಫೆ ೧೯ ರಂದು ನಡೆಯಲಿದ್ದು ಅಂತಿಮ ಪಂದ್ಯದಲ್ಲಿ ಗೆಲವು ಸಾಧಿಸಿದ ತಂಡಕ್ಕೆ ಒಂದು ಲಕ್ಷ ೫೫ ಸಾವಿರ ೫೫೫ ರೂ ಎರಡನೇಯ ಬಹುಮಾನ,೧ಲಕ್ಷ ೧೧ ಸಾವಿರದ ೧೧೧ ರೂ ಹಾಗು ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ ಆಟಗಾರರು ತಮ್ಮ ಪ್ರತಿಭೆ ತೋರಿಸುವ ಜೊತೆಗೆ ಸೌಹಾರ್ದತೆಯ ಆಟ ಆಡಬೇಕು ಎಂದು ಮನವಿ ಮಾಡಿಕೊಂಡರು
ಪ್ರಥಮ ಪಂದ್ಯ ಪ್ರೆಸ್ ಎಲೆವನ್ ಹಾಗು ಅಡವೋಕೆಟ್ ಎಲೆವೆನ್ ನಡುವೆ ನಡೆಯಿತು
ಲೀಣಾ ಟೋಪಣ್ಣವರ,ಸೇರಿದಂತೆ ಅನೇಕ ಜನ ಗಣ್ಯರು ಉಪಸ್ಥಿತರಿದ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *