ಖಾನಾಪೂರ ಕ್ಷೇತ್ರದಲ್ಲಿ ಅಂಜಲಿತಾಯಿಯ ಡೆವಲ್ ಮೆಂಟ್ ಧಮಾಕಾ..!!!

ಬೆಳಗಾವಿ-ವಿವಾದಿತ ಹೇಳಿಕೆ ಕೊಟ್ಟು ಪ್ರಚಾರ ಪಡೆಯುವ ನಾಯಕಿ ಅವರಲ್ಲ ,ಪ್ರಚಾರಕ್ಕಾಗಿ ಜನಸೇವೆ ಮಾಡುವ ಶಾಸಕಿಯೂ ಅವರಲ್ಲ ಸದ್ದಿಲ್ಕದೇ ಕ್ರಾಂತಿ ಮಾಡುತ್ತಿರುವ ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಯಾವುದೇ ರೀತಿಯ ಪ್ರಚಾರ ಬಯಸದೇ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಕದಲ್ಲಿ ಸುಸಂಸ್ಕೃತ ನಾಯಕಿ,ಗಂಡನಿಗೆ ತಕ್ಕ ಹೆಂಡತಿಯಾಗಿ,ಸಂಸಾರದಲ್ಲೂ ಗೆದ್ದಿರುವ ಅಂಜಲಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರದ ಜನ ಸುಶಿಕ್ಷಿತರಾಗಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪಣತೊಟ್ಟು ಕ್ಷೇತ್ರದ ಗಲವಾರು ಗ್ರಾಮಗಳಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದಾರೆ .
ಖಾನಾಪೂರ ಕ್ಷೇತ್ರದ ಗೆಂದಿಗವಾಡ ಗ್ರಾಮದಲ್ಲಿ ಹತ್ತು ಲಕ್ಷ 60 ಸಾವಿರ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಮುಗಳಿಹಾಳ ಗ್ರಾಮದಲ್ಲೂ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಸಂಸ್ಕಾರ ಮತ್ತು ಸಾಮಾಜಿಕ ಕಳಕಳಿ ನೋಡಿ ಅವರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ