ವಾಸ್ತವತೆ ತಿಳಿಯದೇ ಟ್ವೀಟ್ ಮಾಡಿ ಸರ್ಕಾರದ ಮೇಲೆ ಗೂಬೆ ಕೂರಿಸಿದ ನಿಂಬಾಳ್ಕರ್…..!
ಬೆಳಗಾವಿ- ಹುಕ್ಕೇರಿ ತಾಲ್ಲೂಕಿನ ಮನಗುತ್ತಿಯಲ್ಲಿ ಆಗಿದ್ದು ಶಿವಾಜಿ ಮೂರ್ತಿಯ ವಿವಾದ ಅಲ್ಲ,ಅಲ್ಲಿ ನಡೆದಿದ್ದು ಜಾಗೆಯ ವಿವಾದ,ಶಿವಾಜಿ ಮೂರ್ತಿಯನ್ನು ತೆರವು ಮಾಡಲು ಸರ್ಕಾರ ಸೂಚನೆಯೂ ನೀಡಿಲ್ಲ,ಮೂರ್ತಿಯನ್ನು ತೆರವು ಮಾಡಿದ್ದು ಜಿಲ್ಲಾಡಳಿತವೂ ಅಲ್ಲ,ಮೂರ್ತಿ ಪ್ರತಿಷ್ಠಾಪನೆ ಮಾಡಿದವರೇ ಮೂರ್ತಿಯನ್ನು ತೆರವು ಮಾಡಿ,ಇದು ನಮ್ಮ ವಿವಾದ ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಅಲ್ಲಿಯ ಮರಾಠಾ ಸಮಾಜದ ಮುಖಂಡರೇ ಹೇಳಿಕೆ ನೀಡಿದ್ದು ವಾಸ್ತವತೆ.
ಮನಗುತ್ತಿಯಲ್ಲಿ ನಡೆದ ಘಟನೆಯನ್ನು ಕಲ್ಪನೆ ಮಾಡಿಕೊಂಡು,ಅಥವಾ ಯಾರೇ ಹೇಳಿದ್ದನ್ನು ಕೇಳಿಕೊಂಡು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರ ಮನಸ್ಸಿನಿಂದ ಕ್ವಿಟ್ ಆಗಿದ್ದಾರೆ.
ಮಣಗುತ್ತಿಯಲ್ಲಿ ಶಿವಾಜಿ ಪುತ್ಥಳಿ ಪ್ರತಿಷ್ಟಾಪನೆ, ತೆರವು ವಿವಾದದ ಕುರಿತು ಮಹಾರಾಷ್ಟ್ರ ನಾಯಕರಿಗೆ ಪರೋಕ್ಷ ಬೆಂಬಲ ಸೂಚಿಸಿದ ಅಂಜಲಿ ನಿಂಬಾಳ್ಕರ್ ಹುಡುಗಾಟಿಕೆ ಪ್ರದರ್ಶಿಸಿದ್ದಾರೆ. ವಾಸ್ತವತೆ ಅರಿಯದೇ ಟ್ವೀಟ್ ಮಾಡಿ ಉರಿವ ಬೆಂಕಿಗೆ ತುಪ್ಪ ಸುರಿದ ನಿಂಬಾಳ್ಕರ್ ಟ್ವೀಟ್ ಮಾಡಿದ ಸಾರಾಂಶ ಇಲ್ಲಿದೆ ನೋಡಿ.
‘ಪುತ್ಥಳಿ ತೆರವುಗೊಳಿಸಿದ್ದು ರಾಷ್ಟ್ರ ನಾಯಕನಿಗೆ ಮಾಡಿದ ಅಪಮಾನ’
‘ಕರ್ನಾಟಕ ಸರ್ಕಾರ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು’
‘ಸರ್ಕಾರಿ ಗೌರವದೊಂದಿಗೆ ಮೂರ್ತಿ ಪ್ರತಿಷ್ಠಾನ ಮಾಡಬೇಕು’
‘ಮೂರ್ತಿ ತೆರವಿಗೆ ಕಾರಣರಾದವರ ವಿರುದ್ಧ ಕ್ರಮವಾಗಬೇಕು’
ಟ್ವೀಟ್ ಮಾಡಿ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ‘ಕೈ’ ಶಾಸಕಿ
ವಾಸ್ತವತೆ ತಿಳಿಯದೇ ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರದ ವಿರುದ್ದ ಟ್ವೀಟ್ ಮಾಡಿ ಕನ್ನಡಿಗರ ಮನಸ್ಸಿನಿಂದ ಕ್ವೀಟ್ ಆಗಿದ್ದು ಸತ್ಯ.