ಬೆಳಗಾವಿ- ಕುಂದಾನಗರಿಯ ಭೂಮಿಗೆ ಬಂಗಾರದ ಬೆಲೆ ಬಂದಿದೆ ಹೀಗಾಗಿ ಇಲ್ಲಿ ರಿಯಲ್ ಇಸ್ಟೇಟ್ ಮಾಫಿಯಾ ಗರಿಗೆದರಿದ್ದು ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಪುತ್ರ ಅರುಣ ನಂದಿಹಳ್ಳಿಯ ಶೂಟ್ ಔಟ್ ಪ್ರಕರಣ ಬೆಳಗಾವಿಯ ರಿಯಲ್ ಎಸ್ಟೇಟ್ ಜಗತ್ತನ್ನು ಬೆಚ್ಚಿ ಬೀಳಿಸಿದೆ
ನಿನ್ನೆ ತಡರಾತ್ರಿ ಅರುಣ ನಂದಿಹಳ್ಳಿಯನ್ನು ಧಾಮಣೆ ಬಳಿ ತಡೆದು ಶೂಟ್ ಔಟ್ ಮಾಡಲಾಗಿದ್ದು ಅರುಣ ಮದ್ಯರಾತ್ರಿಯೇ ಪ್ರಾಣ ಬಿಟ್ಟಿದ್ದಾನೆ ಶೂಟ್ ಔಟ್ ಪ್ರಕರಣದ ತನಿಖಾ ಕಾರ್ಯಾಚರಣೆ ಆರಂಭವಾಗಿದೆ
ಇದೊಂದು ಸುಪಾರಿ ಕೊಲೆ ಎಂದು ಶಂಕಿಸಲಾಗಿದ್ದು ಕೊಲೆಗೆ ದಾಯಾದಿ ಕಲಹ ಕಾರಣವೋ ? ಆಸ್ತಿ ಹಂಚಿಕೆಯ ವಿಚಾರವೋ ಎನ್ನುವದನ್ನು ಪೋಲೀಸರು ತನಿಖೆ ಮಾಡುತ್ತಿದ್ದಾರೆ .
ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ಅರುಣ ನಂದಿಹಳ್ಳಿಗೆ ಸೇರಿದ ಬೆಲೆಬಾಳುವ ಖುಲಾ ಜಾಗೆ ಇದೆ.ಅರುಣ ನಂದಿಗಳ್ಳಿ ಇಬ್ಬರ ಜೊತೆ ವಿವಾಹವಾಗಿದ್ದ ಈ ಜಾಗೆಗೆ ಸಮಂದಿಸಿದಂತೆ ಇಬ್ಬರು ಹೆಂಡಿರ ನಡುವೆ ವಿವಾದ ನಡೆದಿತ್ತು ಈ ವಿವಾದವೇ ಸೂಪಾರಿ ಕೊಲೆಗೆ ಕಾರಣವಾಯ್ತಾ ? ಎನ್ನುವ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ
ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಶಾರ್ಪ ಶೂಟರ್ ಗಳನ್ನು ಸುಪಾರಿ ಕಿಲ್ಲರ್ ಗಳನ್ನು ವಿಚಾರಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ ಕೊಲೆಗೆ ಸಮಂದಿಸಿದಂತೆ ಆರು ಜನರ ಮೇಲೆ ಸಸ್ಪೆಕ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಅರುಣ ನಂದಿಹಳ್ಳಿ ಶೂಟ್ ಔಟ್ ಪ್ರಕರಣ ಕುಂದಾ ನಗರಿಯನ್ನು ಬೆಚ್ಚಿ ಬೀಳಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ