Breaking News

ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಮರ್ಡರ್ ಗೆ ಕಾರಣ ದುಡ್ಡೋ ..ಹೆಣ್ಣೋ….!!!!

ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಮರ್ಡರ್ …ಮುಂದುವರೆದ ತನಿಖೆ ಇನ್ನುವರೆಗೆ ಯಾವುದೇ ಆರೋಪಿ ಅರೆಸ್ಟ ಆಗಿಲ್ಲ

ಬೆಳಗಾವಿ- ಮಾಜಿ ಶಾಸಕ ಪರಶರಾಮ ನಂದಿಹಳ್ಳಿ ಪುತ್ರ ಅರುಣ ನಂದಿಹಳ್ಳಿ ಪ್ರಕರಣ ಈಗ ತನಿಖಾ ಹಂತದಲ್ಲಿದೆ ದೂರಿನಲ್ಲಿರುವ ಅಂಶಗಳನ್ನು ಬಿಟ್ಟು ಪೋಲೀಸರು ಬೇರೆ ಆ್ಯಂಗಲ್ ನಲ್ಲಿ ತನಿಖೆ ಶುರು ಮಾಡಿಕೊಂಡಿದ್ದಾರೆ

ಮಾಜಿ ಶಾಸಕನ ಪುತ್ರ ಅರುಣ ನಂದಿಹಳ್ಳಿ ಮೊದಲನೆಯ ಹೆಂಡತಿಗೆ ಮಕ್ಕಳಾಗಿಲ್ಲ ಅಂತ ಮೊದಲನೇಯ ಹಡತಿಯ ಒಪ್ಪಿಗೆ ಮೇರೆಗೆ ಎರಡನೇಯ ಮದುವೆಯಾಗಿದ್ದ ಇಬ್ಬರನ್ನೂ ಈ ಅರುಣ ಚನ್ನಾಗಿ ನೋಡಿಕೊಂಡಿದ್ದ

ಮೊದಲನೇಯ ಹೆಂಡತಿ ಗಂಡನ ಮರ್ಡರ್ ಆದ ತಕ್ಷಣ ಪೋಲೀಸರಿಗೆ ದೂರು ನೀಡಿದ್ದಳು ಆ ದೂರಿನಲ್ಲಿ ಮೃತ ಅರುಣ ಸಹೋದರ ವಿಜಯ ಮತ್ತು ಹಣಕಾಸಿನ ವ್ಯೆವಹಾರದ ಬಗ್ಗೆ ಉಲ್ಲೇಖವಾಗಿತ್ತು ಆದರೆ ಪೋಲೀಸರು ದೂರಿನಲ್ಲಿರುವ ಅಂಶಗಳನ್ನು ಬಿಟ್ಟು ಬೇರೆ ಆ್ಯಂಗಲ್ ನಲ್ಲಿ ತನಿಖೆ ಶುರು ಮಾಡಿಕೊಂಡಿದ್ದಾರೆ

ಬೆಳಗಾವಿ ಪೋಲೀಸರು ಕ್ರೈಂ ಪೆಟ್ರೋಲ್ ಸೋನಿ ಟಿವ್ಹಿ ದಾರವಾಹಿಯ ಮಾದರಿಯಲ್ಲಿ ತನಿಖೆ ಮುಂದುವರೆಸಿದ್ದಾರೆ

ಗಂಡನ ಮರ್ಡರ್ ಬಗ್ಗೆ ಮೊದಲನೇಯ ಹೆಂಡತಿ ಕೊಟ್ಟ ದೂರನ್ನು ದೂರವಿಟ್ಟು ಒಳಮರ್ಮ ತಿಳಿಯುವ ಪ್ರಯತ್ನದಲ್ಲಿ ಬೆಳಗಾವಿ ಪೋಲಿಸರಿದ್ದು ಈ ಮರ್ಡರ್ ಪ್ರಕರಣ ಟ್ವಿಸ್ಟ ಆಗೋದು ಗ್ಯಾರಂಟಿಯಾಗಿದೆ

ಇಬ್ಬರ ಹೆಂಡಿರ ಗಂಡನ ಕೊಲೆ ಆದಾಗ,ಕೊಲೆಯಾದ ಗಂಡ ಕೋಟ್ಯಾಂತರ ರೂ ಆಸ್ತಿ ಮಾಲಿಕ ಆಗಿದ್ದಾಗ ಪೋಲೀಸರು ಹಲವಾರು ಆಯಾಮಗಳಿಂದ ತನಿಖೆ ಮಾಡೋದು ಸಹಜ

ಒಟ್ಟಾರೆ ಮಾಜಿ ಶಾಸಕನ ಪುತ್ರನ ಕೋಟ್ಯಾಂತರ ರೂ ಬೆಲೆಬಾಳುವ ಆಸ್ತಿಗಾಗಿ ರಿವಾಲ್ವರ್ ಬಟನ್ ಒತ್ತಿದವರ್ಯಾರು ಅನ್ನೋದನ್ನು ಪೋಲೀಸರು ಪತ್ತೆ ಮಾಡುತ್ತಿದ್ದಾರೆ

ಯಾವುದೇ ಹೆಣ್ಣು ತನ್ನ ಗಂಡ ಇನ್ನೊಬ್ಬ ಹೆಣ್ಣಿನ ಮೇಲೆ ಕಣ್ಣು ಹಾಕಿದಾಗ ಸಿಡಿದ್ಹೇಳುತ್ತಾಳೆ ಆದ್ರೆ  ಮೊದಲನೇಯ ಹೆಂಡತಿಗೆ ಮಕ್ಕಳಾಗಿಲ್ಲ ಅಂತ ಮೊದಲನೇಯ ಹೆಂಡತಿ ಎರಡನೇಯ ಮದುವೆಗೆ ಅನುಮತಿ ಕೊಟ್ಟಿದ್ದು ಯ್ಯಾಕೆ ಅನ್ನೋದು ತಿಳಿಯುತ್ತಿಲ್ಲ ಹೀಗೂ ಆಗಬಹುದೇ ಮೊದಲನೇಯ ಹೆಂಡತಿಯ ದೂರು ಆಧರಿಸಿ ಪೋಲೀಸರು ಈಗ ತನಿಖೆ ಮಾಡುತ್ತಿಲ್ಲ

ಮೊದಲನೇಯ ಹೆಂಡತಿಯ ದೂರಿನನಲ್ಲ ಹಲವಾರು ಜನರ ಹೆಸರುಗಳಿವೆ ಆದ್ರೆ ಅವರನ್ನು ಪೋಲೀಸರು ಬಂಧಿಸಿಲ್ಲ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *