ಬೆಳಗಾವಿ- ಮಹಾದಾಯಿ ವಿಚಾರದಲ್ಲಿ ಪುಂಡಾಟಿಕೆ ನಡೆಸಿರುವ ಗೋವಾ ಸರ್ಕಾರದ ವಿರುದ್ಧ ಆರ್ಥಿಕ ದಿಗ್ಭಂಧನ ವಿಧಿಸುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲರಿಗೆ ಮನವಿ ಸಲ್ಲಿಸಿವೆ
ಬೆಳಗಾವಿ ಯಲ್ಲಿ ಎಂಬಿ ಪಾಟೀಲರನ್ನು ಭೇಟಿಯಾದ ಕನ್ನಡಪರ ಸಂಘಟನೆಗಳ ನಾಯಕರು ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ್ ಕನ್ನಡಿಗರನ್ನು ನಿಂಧಿಸಿದ್ದು ಅವರ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸಿ ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ದಿನನಿತ್ಯ ಸರಬರಾಜಾಗುವ ಹಣ್ಣು ತರಕಾರಿ ಹಾಗು ಹಾಲಿನ ಪೂರೈಕೆಯನ್ನು ನಿಲ್ಲಿಸಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ನಾಯಕರು ಸಚಿವ ಎಂಬಿ ಪಾಟೀಲರಿಗೆ ಮನವಿ ಅರ್ಪಿಸಿದರು
ಗೋವಾ ರಾಜ್ಯಕ್ಕೆ ಕರ್ನಾಟಕದಿಂದಲೇ ಹೆಚ್ವಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಿದ್ದಾರೆ ಇದನ್ನು ತಡೆಯಲು ದಾಂಡೇಲಿ ಸೇರಿದಂತೆ ಇತರ ಪ್ರವಾಸಿ ಸ್ಥಳಗಳನ್ಮು ಅಭಿವೃದ್ಧಿ ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದರು
ಅಶೋಕ ಚಂದರಗಿ.ಮಹಾದೇವ ತಳವಾರ ,ದೀಪಕ ಗುಡಗನಟ್ಟಿ,ಗಣೇಶ ರೋಕಡೆ ಸೇರಿದಂತೆ ಇತರ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು