ಬೆಳಗಾವಿ-ಮುಂಬಯಿ ಕರ್ನಾಟಕಕ್ಕೆ”ಕಿತ್ತೂರು ಕರ್ನಾಟಕ”ಎಂದು ರಾಜ್ಯ
ಸರಕಾರ ಮರುನಾಮಕರಣ ಮಾಡಿ
ಎಂಟು ತಿಂಗಳಾದರೂ ಬೆಳಗಾವಿ ಕಂದಾಯ
ವಿಭಾಗದ ಏಳು ಜಿಲ್ಲೆಗಳ ರಸ್ತೆ ಸಾರಿಗೆ
ಸಂಸ್ಥೆಯ ಬಸ್ಸುಗಳ ಮೇಲೆ ಇನ್ನೂ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ
ಸಂಸ್ಥೆ ಎಂಬ ಹೆಸರೇ ಮುಂದುವರೆದಿದೆ.
ಇದನ್ನು ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ
ಸಂಸ್ಥೆ ಎಂದು ಬದಲಿಸಬೇಕೆಂದು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿಯು ರಾಜ್ಯ ಸಾರಿಗೆ
ಸಚಿವ ಶ್ರೀ ಶ್ರೀರಾಮುಲು ಅವರನ್ನು
ಒತ್ತಾಯಿಸಿದೆ.
ಕಳೆದ ಶನಿವಾರ ಜುಲೈ 16 ರಂದು
ಬೆಂಗಳೂರಿನಲ್ಲಿ ಸಚಿವರಿಗೆ ಮನವಿ
ಸಲ್ಲಿಸಿದ ಕ್ರಿಯಾ ಸಮಿತಿಯ
ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಅವರು,
2019 ರ ಸಪ್ಟೆಂಬರ್ 17 ರಂದು
ಹೈದ್ರಾಬಾದ ಕರ್ನಾಟಕಕ್ಕೆ ಕಲ್ಯಾಣ
ಕರ್ನಾಟಕ ಎಂದು ಮರುನಾಮಕರಣ
ಮಾಡಿದ ನಂತರ ಅಲ್ಲಿಯ ಬಸ್ಸುಗಳ
ಮೇಲೆ ಕಲ್ಯಾಣ ಕರ್ನಾಟಕ ಎಂದು
ಬರೆಸಲಾಗಿದೆ.ಅದೇ ರೀತಿ ನಮ್ಮ
ಭಾಗದ ಬಸ್ಸುಗಳ ಮೇಲೆ
ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ
ಸಂಸ್ಥೆ ಎಂದು ಬರೆಸಬೇಕು ಎಂದು
ಒತ್ತಾಯಿಸಿದರು.
ಈ ಸಂಬಂಧ ಆದಷ್ಟು ಬೇಗ
ಸೂಕ್ತ ಆದೇಶ ಹೊರಡಿಸುವದಾಗಿ
ಸಾರಿಗೆ ಸಚಿವರು ಭರವಸೆ ನೀಡಿದರು.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
9620114466
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ