Breaking News

ಅಶೋಕ ಚಂದರಗಿ ಅವರನ್ನು ಎಂ.ಎಲ್ ಸಿ ಮಾಡಲು,ಬೆಳಗಾವಿಯ ಕನ್ನಡ ಸಂಘಟನೆಗಳ ಒಗ್ಗಟ್ಟು

ಬೆಳಗಾವಿ- ಹಲವಾರು ದಶಕಗಳಿಂದ ಕನ್ನಡಪರ ಹೋರಾಟ ಮಾಡುತ್ತ ಬಂದಿರುವ ಸಮಾಜ ಚಿಂತಕ,ಹಿರಿಯ ಪತ್ರಕರ್ತ ಅಶೋಕ ಚಂದರಗಿ ಅವರನ್ನು ಚಿಂತಕರ ಚಾವಡಿ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ವಿವಾದದಲ್ಲಿ ಬೆಳಗಾವಿಯ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರದ ಬಳಿ,ಹಕ್ಕೊತ್ತಾಯ ಮಾಡಲು ಬೆಂಗಳೂರಿಗೆ ಕನ್ನಡ ಹೋರಾಟಗಾರರ ನಿಯೋಗ ತೆರಳಿದೆ.

ಗಡಿ ಇನ್ನಷ್ಟು ಗಟ್ಟಿಗೊಳಿಸುವ ವಿಚಾರವಾಗಿ ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ಪರ ಹೋರಾಟ ಮಾಡಿದ ಹೋರಾಟಗಾರರನ್ನು ಈ ಬಾರಿ ವಿಧಾನ ಪರಿಷತ್ತಿಗೆ ನೇಮಕ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಬೆಳಗಾವಿ ಎಲ್ಲಾ ಸಂಘಟನೆಗಳ ಮುಖಂಡರು ಒಟ್ಟಾಗಿ ಅಶೋಕ ಚಂದರಗಿ ಅವರನ್ನು ಪರಿಷತ್ತಿಗೆ ಕಳುಹಿಸಲು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಿಎಂ ಬಿ, ಎಸ್ ಯಡಿಯೂರಪ್ಪ, ವಿಪಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಇಂದು ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘಟನೆಗಳ ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿದ್ದು, ನಾಳೆ ನಾಯಕರ ಭೇಟಿ ಮಾಡಲಿದ್ದಾರೆ.

ರಾಜ್ಯದಲ್ಲಿ ಖಾಲಿಯಾಗಿರೋ 7 ವಿಧಾನ ಪರಿಷತ್ತು ಸ್ಥಾನಗಳಿಗೆ ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಗಡಿ ಭಾಗ ಹೋರಾಟಗಾರರಿಗೆ ಒಂದು ಅವಕಾಶ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಬೆಳಗಾವಿ ಗಡಿ, ಭಾಷೆ ವಿಚಾರವಾಗಿ ಅಶೋಕ ಚಂದರಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಅನೇಕ ಸಂದರ್ಭದಲ್ಲಿ ಸರ್ಕಾರವನ್ನು ಎಚ್ಚರಿಸುವ ಮೂಲಕ ಕನ್ನಡ ಗಟ್ಟಿಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. 35ವರ್ಷಗಳಿಂದ ಕನ್ನಡಕ್ಕಾಗಿ ಸೇವೆ ಮಾಡಿದ್ದು, ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಂದರಗಿ ಸಮಿತಿ ನೇಮಕವಾಗಿತ್ತು. 3 ತಿಂಗಳ ಕಾಲ ಗಡಿ ಭಾಗದಲ್ಲಿ ಓಡಾಡಿ ಗಡಿ ಭಾಗದ ಕನ್ನಡ ಶಾಲೆ ಸ್ಥಿತಿಗತಿ ಬಗ್ಗೆ ಸಮಗ್ರ ವರದಿಯನ್ನು ಚಂದರಗಿ ಸಮಿತಿ ನೀಡಿತ್ತು. ಸಮಿತಿ ನೀಡಿದ ವರದಿಯನ್ನು ಸರಕಾರ ಅನುಷ್ಠಾನ ಮಾಡಿದ್ದು ವಿಶೇಷ. ಈ ಮೂಲಕ ಗಡಿ ಭಾಗದಲ್ಲಿ ಕನ್ನಡ ಮತ್ತಷ್ಟು ಬೆಳೆಯಲು ಸಹಕಾರಿಯಾಗಿದೆ.

ಕೇವಲ ಕನ್ನಡ ಭಾಷೆ, ಗಡಿ ವಿಚಾರ ಅಷ್ಟೇ ಅಲ್ಲದೇ ಪ್ರವಾಹ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸಾವಿರಾರು ಜನರಿಗೆ ಆಹಾರದ ಕಿಟ್ ನೀಡುವ ಮೂಲಕ ಮಾನವಿತೆ ಪ್ರದರ್ಶನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1800ಕ್ಕೂ ಹೆಚ್ಚು ಜನ ಬಡವರು, ಮದ್ಯಮ ವರ್ಗದ ಜನರಿಗೆ ಇದರಿಂದ ಉಪಯೋಗವಾಗಿದೆ.

ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ಅನೇಕ ಬಣಗಳು ಇವೆ. ಆದರೇ ಅಶೋಕ ಚಂದರಗಿ ವಿಚಾರದಲ್ಲಿ ಬೆಳಗಾವಿಯ ಎಲ್ಲಾ ಸಂಘಟನೆಗಳ ಮುಖಂಡರು ಒಗ್ಗಟ್ಟು ಪ್ರರ್ದಶನ ಮೂಲಕ ಬದ್ಧತೆಯನ್ನು ಪ್ರದರ್ಶನ ಮಾಡಿದ್ದಾರೆ. ಪ್ರಮುಖ ನಾಯಕರನ್ನು ಭೇಟಿ ಮಾಡಿ ಗಡಿ ಭಾಗಕ್ಕೆ ಸ್ಥಾನ ಒದಿಗುಸವ ಬಗ್ಗೆ ಮನವಿ ಮಾಡಲಿದ್ದಾರೆ.

ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿರೋ ನಿಯೋಗದಲ್ಲಿ ಕರವೇ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಕನಸೇ ಜಿಲ್ಲಾಧ್ಯಕ್ಷ ಬಾಬು ಸಂಗೊಡಿ ಹಾಗೂ  ಶಿವಪ್ಪ ಶಮರಂತ,ರಮೇಶ ಯರಗಣ್ಣವರ,ಬಾಳು ಜಡಗಿ, ಸೇರಿ ಅನೇಕರು ತೆರಳಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *