(ಅಶೋಕ ಚಂದರಗಿ)
ಕೊರೋನಾ ಸೋಂಕು ಶ್ವಾಸಕೋಶ
ಪ್ರವೇಶಿಸುವ ಮುನ್ನವೇ ಮೂಗು ಮತ್ತು ಗಂಟಲಲ್ಲಿ ಅದನ್ನು ನಾಶ ಮಾಡುವ ಒಂದು ಕ್ರಮವಾಗಿ ಬಿಸಿ ನೀರಿನ ಹಬೆ ತೆಗೆದುಕೊಳ್ಳಬೇಕೆಂದು ದೇಶದ ಅನೇಕ ತಙ್ಞರು ಹೇಳುತ್ತಲೇ ಇದ್ದಾರೆ.ಆದರೆ ರಾಜ್ಯ ಸರಕಾರದ ಆರೋಗ್ಯ ಸಚಿವರು ಮೊದಲ ಬಾರಿಗೆ ಅಧಿಕೃತವಾಗಿ ಈ ಸಲಹೆಯನ್ನು ಜನತೆಗೆ ನೀಡಿದ್ದಾರೆ.
ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆಯ ಟ್ಯೂಬ್ ಹಾಕಿಯೊ, ಅರಿಷಿಣ ಉಪ್ಪು ಹಾಕಿಯೊ ಹಬೆ ತೆಗೆದುಕೊಳ್ಳಲಾಗುತ್ತದೆ.ತುಳಸಿ ಎಲೆ ಅಥವಾ
ಯುನಾನಿ ವೈದ್ಯರ ಸಲಹೆಯಂತೆ ಆರ್ಕಿಅಜೀಬ್ ಎಣ್ಣೆಯ ಎರಡು ಹನಿಯನ್ನೂ ಸಹ ಬಳಸಬಹುದಾಗಿದೆ.
ಹಬೆಯಿಂದಾಗಲಿ, ಈ ಔಷಧಿಗಳಿಂದಾಗಲಿ ಸೈಡ್ ಇಫ್ಫೆಕ್ಟಗಳಂತೂ ಇಲ್ಲ.ಆದರೆ ಕೆಲವು ಆಲೋಪಥಿಕ್ ವೈದ್ಯರು ಹಬೆಯ ಬಗ್ಗೆ ಅಪಸ್ವರ ಎತ್ತುತ್ತಿರುವದು ಅಚ್ಚರಿಯ ಸಂಗತಿಯಾಗಿದೆ.ಆಯುಷ್ಯ ಇಲಾಖೆಯು ಕೊರೋನಾ ಸೋಂಕು ತಡೆಗೆ ಅರ್ಸೇನಿಕ್ ಅಲ್ಬಮ್ ಹೋಮಿಯೊಪಥಿ
ಗುಳಿಗೆಗಳನ್ನು ವಿತರಿಸುವಾಗಲೂ ಅಲೋಪಥಿಕ್ ವೈದ್ಯರ ಅಪಸ್ವರ ಇದ್ದೇ ಇತ್ತು.ಕೇಂದ್ರ ಸರಕಾರದ ಆಯುಷ್ಯ ಇಲಾಖೆಯು ಕೊರೋನಾ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸೆಣಸುತ್ತಿದ್ದು ಸೋಂಕು ತಡೆಗೆ ಪ್ರಯತ್ನಿಸುತ್ತಿದೆ.
ಖ್ಯಾತ ಆಯುರ್ವೇದ ವೈದ್ಯ ಡಾ.ಗಿರಿಧರ ಜೆ.ಅವರೂ ಸಹ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.ಸೋಂಕು ಪೀಡಿತರನ್ನು ಗುಣಪಡಿಸುವ ಸಂಬಂಧ ಮನಗಾಣಿಸಿಕೊಟ್ಟಿದ್ದಾರೆ.ಆಯುರ್ವೇದ ಪದ್ಧತಿಯ ಮೂಲಕ ಹತ್ತು ಕೊರೋನಾ ಪೀಡಿತರನ್ನು ಗುಣಪಡಿಸಲು ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.
ಕಳೆದ ಎರಡು ತಿಂಗಳಿಂದಲೂ ನಾನು ಮುಂಜಾನೆ 7 ಕ್ಕೆ ಮತ್ತು ರಾತ್ರಿ ಮನೆಗೆ ಮರಳಿದ ಮೇಲೆ 9 ಗಂಟೆಗೆ ಹಬೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತೇನೆ.ಎರಡೂ ಹೊತ್ತು ಬಿಸಿ ನೀರಿನಲ್ಲಿ ಅರಿಷಿಣ ಉಪ್ಪು ಗುಳುಗುಳಿಸುವದು,ಎರಡೂ ಹೊತ್ತು ಕಷಾಯ ಕುಡಿಯುವದು, ಮುಂಜಾನೆ ಕಪಾಲಭಾತಿ, ಪ್ರಾಣಾಯಾಮ, ಐದು ನಿಮಿಷ ಓಂಕಾರ, ಯೋಗಾಸನ ಹಾಗೂ ದಿನವಿಡಿ ಮಾಸ್ಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಚಾಚೂ ತಪ್ಪದೇ ಮಾಡುತ್ತೇನೆ.
ಚಳಿಗಾಲದಲ್ಲಿ ಕಫ, ಕೆಮ್ಮು, ಶೀನು ಸಾಮಾನ್ಯ.ಅದಕ್ಕೆ ಭಯ ಬೇಡ.ಆದರೆ
ಮುಂಜಾಗ್ರತೆ ಅವಶ್ಯ.ಇನ್ನೆರಡು ತಿಂಗಳು ಜಾಗ್ರತೆಯಿರಲಿ.ಜನೇವರಿಯಲ್ಲಿ ವ್ಯಾಕ್ಸಿನ್ ಬಂದೇ ಬರಲಿದೆ.ಈ ಸಂಬಂಧದ ಸಿದ್ಧತೆಗಳ ಬಗ್ಗೆ ಮತ್ತೆ ಬರೆಯುತ್ತೇನೆ.
ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466