ಬೆಳಗಾವಿ- ಬೆಳಗಾವಿ ಗಡಿ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಗಡಿ ಮುತುವರ್ಜಿ ವಹಿಸಲು ಸಿಎಂ ಸಿದ್ದರಾಮಯ್ಯ ನೇರವಾಗಿ ಹಸ್ತಕ್ಷೇಪ ಮಾಡಲಯ ಆಗ್ರಹಿಸಿ ಬೆಳಗಾವಿ ಕನ್ನಡ ಸಂಘಟನೆಗಳು ಸಾತ್ವಿಕ ಸಂತಾಪ ವ್ಯಕ್ತಪಡಿಸಲು ಪ್ರತಿಭಟನೆ ಹಮ್ಮಿಕೊಂಡಿವೆ.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಯುತ್ತಿದೆ. ಕನ್ನಡ ಕ್ರೀಯಾ ಸಂಘಟನೆ ಅಧ್ಯಕ್ಷ ಅಶೋಕ್ ಚಂದರಗಿ, ರಾಘವೇಂದ್ರ ಜೋಶಿ ಮಹಾದೇವ ತಳವಾರ ಸೇರಿ ಅನೇಕರು ಪಾಲ್ಗೊಂಡಿದ್ದಾರೆ.
ಇತ್ತೀಚಿಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನಪ್ರತಿನಿಧಿಗಳ ಸ್ವ ಹಿತಾಸಕ್ತಿ ಕನ್ನಡಿಗರಿಗೆ ಮೇಯರ್ ಪಟ್ಟ ತಪ್ಪಿತ್ತು. ಈ ವೇಳೆಯಲ್ಲಿ ಸಿಎಂ ಮದ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕಿತ್ತು. ಆದರೇ ಸಿಎಂ ಬೆಳಗಾವಿ ಸಮಸ್ಯೆ ಗಮನ ಹರಿಸಿಲ್ಲ.
ಇನ್ನೂ ಗಡಿ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಹೆಚ್ಚಿನ ಅಧಿಕಾರ ನೀಡಬೇಕು. ಜತೆಗೆ ಗಡಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಗಮನ ಹರಿಸಬೇಕು. ಜತಗೆ ಪಾಲಿಕೆಯಲ್ಲಿ ಸ್ವಹಿತಾಸಕ್ತಿಗೆ ಕನ್ನಡಿಗರನ್ನು ಬಲಿ ಕೊಟ್ಟ ಸಚಿವರು, ಶಾಸಕರು ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ರು.