Breaking News

ಕಸಗೂಡಿಸುವ ವಾಹನದಲ್ಲಿ ಸಂಚರಿಸಿ, ಅಧಿಕಾರಿಗಳನ್ನು ನಡುಗಿಸಿದ ಪಾಲಿಕೆ ಕಮಿಷ್ನರ್…!

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರು ಇಂದು ಬೆಳಿಗ್ಗೆ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಸ ವಿಲೇವಾರಿಯನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ನಾಗರಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಾವಿ- ಇಂದು ಬೆಳಗಿನ ಜಾವ, 5-30 ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಎಲ್ಲ ವಾಹನ ಚಾಲಕರಿಗೆ ಹಾಗು ಕ್ಲೀನರ್ಸರವರಿಗೆ ಬೆಳಿಗ್ಗೆ 5-45 ಗಂ ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಸ್ವತ: ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ನಗರ ಸಂಚಾರ ಮಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕಿಲ್ಲಾಕೆರೆ ಬಿಟ್ ಕಚೇರಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು . ನಂತರ ನಗರ ಸೇವಕರಾದ ಅಫ್ರೋಜ ಮುಲ್ಲಾ ಇವರೊಂದಿಗೆ ವಾರ್ಡ ನಂ 5 ರ ಖಡೆಬಜಾರ ಹಾಗೂ ದರ್ಬಾರ್ ಗಲ್ಲಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಸಂಬಂಧಪಟ್ಟ ನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡಿದರು ಮತ್ತು ಸಾರ್ವಜನಿಕರ ಅಹವಾಲುಗಳ ಕುರಿತು ಚರ್ಚಿಸಿ, ಸಂಬಂದಪಟ್ಟವರಿಗೆಲ್ಲ ನಿರ್ದೇಶನ ನೀಡಿದರು.

ನಂತರ ಕೋತ್ವಾಲ್ ಗಲ್ಲಿ ಮತ್ತು ಕಾಕರ ಗಲೀ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ. ತರಕಾರಿ ಮಾರುಕಟ್ಟೆಯ ತ್ಯಾಜ್ಯವೂ ಅದೇ ದಿನ ರಾತ್ರಿ 9:00 ಗಂ ನಂತರ ವಿಲೇವಾರಿಯಾಗಬೇಕೆಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು. ನಂತರ ಬೃಹತ್ ತ್ಯಾಜ್ಯ ಉತ್ಪಾದಕರಾದ ಪೈ ಹೋಟೆಲಗೆ ವಿಸಿಟ್ ಮಾಡಿ ಹಸಿ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಪರಿಶೀಲಿಸಿದರು.

ಅದೇ ರೀತಿ ಎಲ್ಲಾ ಬೃಹತ್ತ್ಯಾಜ್ಯ ಉತ್ಪಾದಕರಿಗೆ ನಿರ್ದೇಶನ ನೀಡಲು ಸಭೆಯನ್ನು ಕರೆಯಲು ಪರಿಸರ ಅಭಿಯಂತರರಿಗೆ ನಿರ್ದೇಶನ ನೀಡಿದರು. ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ದಂಡು ಮಂಡಳಿಯ ಅಧಿಕಾರಿಗಳನ್ನು ಕಸವನ್ನು ಸರಿಯಾದ ಸಮಯಗೆ ವಿಲೇವಾರಿ ಮಾಡಲು ಸೂಕ್ತ ನಿರ್ದೇಶನ ನೀಡಿದರು.

ನಂತರ ರುಕ್ಮಿಣಿ ನಗರ ಸೇವಕರೊಂದಿಗೆ ವಾರ್ಡ್ ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು ಅದೇ ರೀತಿ ರುಕ್ಮಿಣಿ ನಗರ್, ಉದ್ಯಾನವನಕ್ಕೆ ಭೇಟಿ ನೀಡಿ ಗಾರ್ಡನ್ ಇನ್ಸ್ಪೆಕ್ಟರ್ ಗೆ ಸಸಿಯನ್ನು ನೀಡಲು ನಿರ್ದೇಶನ ನೀಡಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *