ಬೆಳಗಾವಿ- ಕನ್ನಡಿಗರಿಗೆ ಹರಾಮಿ ಎಂದ ಗೋವಾ ಮಂತ್ರಿ ವಿನೋದ ಪಾಳೇಕರ್ ದೊಡ್ಡ ಹರಾಮಿ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಕಿಡಿಕಾರಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗೋವಾ ದವರು ನಮಗೆ ಕುಡಿಯಲು ನೀರು ಕೊಡದಿದ್ರೆ ಅವರಿಗೆ ನಾವು ಹಾಲು,ತರಕಾರಿ,ವಿದ್ಯುತ್ತ ಯ್ಯಾಕೆ ಕೊಡಬೇಕು ? ಎಂದು ಪ್ರಶ್ನಿಸಿದ ಅಶೋಕ ಪಟ್ಟಣ ಕನ್ನಡಿಗರಿಗೆ ಹರಾಮಿ ಎಂದ ಗೋವಾ ಮಂತ್ರಿಗೆ ಕನ್ನಡಿಗರು ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು
ಗೋವಾ ಗೆ ದಿನನಿತ್ಯ ಬೆಳಗಾವಿಯಿಂದ ಸರಬರಾಜು ಆಗುವ ಹಣ್ಣು ತರಕಾರಿ ,ಹಾಲು ವಿದ್ಯುತ್ತ ಕಟ್ ಮಾಡ್ತೀವಿ ಈ ಬಗ್ಗೆ ಸರ್ಕಾರದ ಗಮನ ಸೇಳಿತೀವಿ ಗೋವಾಗೆ ಪಾಠ ಕಲೀಸ್ತೀವಿ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಗೋವಾ ವಿರುದ್ಧ ಗುಡುಗಿದ್ದಾರೆ
ಗೋವಾ ಮಂತ್ರಿ ವಿನೋದ ಪಾಳೇಕರ ಬೆಳಗಾವಿ ಪ್ರವೇಶ ಮಾಡದಂತೆ ತಡೆಯಬೇಕು ಕನ್ನಡ ಸಂಘಟನೆಗಳ ನಾಯಕರು ಈ ಮಂತ್ರಿಯ ವಿರುದ್ಧ ಚಳುವಳಿ ಮಾಡಿ ಪಾಠ ಕಲಿಸಬೇಕು ಎಂದು ಅಶೋಕ ಪಟ್ಟಣ ಸಲಹೆ ನೀಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ