ಬೆಳಗಾವಿ- ಕಪ್ಪತಗುಡ್ಡದಲ್ಲಿ ಅಪಾರ ಜೀವ ವೈವಿದ್ಯತೆ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಪ್ಪತಗುಡ್ಡ ಪ್ರದೇಶವನ್ನು ಉಳಿಸಬೇಕು ಬೆಳೆಯಬೇಕು ಮತ್ತು ಇದನ್ನು ಬೆಳೆಸಬೇಕು ಎಂದು ಡಾ ಶಿವಕುಮಾರ ಶ್ರೀಗಳು ಒತ್ತಾಯಿಸಿದರು
ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮತ್ತು ಭೀಮಪ್ಪ ಗಡಾದ ಅವರೊಂದಿಗೆ ಪತ್ರಿಕಾಗೋಷ್ಠ ನಡೆಸಿದ ಶ್ರೀಗಳು ಗದಗ ಜಿಲ್ಲೆಯಲ್ಲಿ ವ್ಯಾಪಿಸಿಕೊಂಡಿರುವ ಅಪಾರ ಸಸ್ಯಕಾಶಿ ಹೊಂದಿರುವ ಕಪ್ಪತ ಗುಡ್ಡದಲ್ಲಿ ಅಮೂಲ್ಯವಾದ ಔಷಧಿ ಸಸ್ಯಗಳಿವೆ ಸುಗಂಧಿತ ಸಸ್ಯಗಳಿವೆ ಗುಡ್ಡದ ಗರ್ಭದಲ್ಲಿ ಅಪಾರ ಸಂಪತ್ತು ಹೊಂದಿದ್ದು ಇದರ ಸಂರಕ್ಷಣೆ,ಸಂವರ್ಧನೆ ಮತ್ತು ಸಂಶೋಧನೆ ನಡೆಯಬೇಕು ಎಂದು ಶ್ರೀಗಳು ಒತ್ತಾಯಿಸಿದರು
ಸರ್ಕಾರ ಕೇವಲ ೧೭ ಸಾವಿರ ಹೆಕ್ಟೇರ್ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಘೋಷಿಸಿದೆ ಆದರೆ ಕಪ್ಪತಗುಡ್ಡ ೩೩ ಸಾವಿರ ಹೆಕ್ಟೇರ್ ಪ್ರದೇಶ ಹೊಂದಿದ್ದು ಗುಡ್ಡದ ಇಡೀ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು ಎಂದು ನಂದಿವೇರಿ ಮಠದ ಶ್ರೀಗಳು ಒತ್ತಾಯಿಸಿದರು
ಕಪ್ಪತಗುಡ್ಡದ ಪಕ್ಕದಲ್ಲಿ ತುಂಗ ಭದ್ರಾ ನದಿ ಹರಿಯುತ್ತಿದೆ ಈ ನದಿಯಿಂದ ಕಪ್ಪತಗುಡ್ಡದ ಸೆರಗಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಬೇಕು ಇಲ್ಲಿಯ ಸಸ್ಯರಾಶಿಯ ಸಂರಕ್ಷಣೆ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು