ಬೆಳಗಾವಿ-ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಸಮರ ನಡೆಯುತ್ತಿದೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಇಲೆಕ್ಷನ್ ಹಲ್ ಚಲ್ ಜೋರಾಗಿಯೇ ನಡೆದಿದೆ
ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ರಾಜಕಾರಣ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಜೊತೆ ಮುನಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸದೇ ಪಕ್ಷದಿಂದ ದೂರ ಉಳಿದಿರುವದರಿಂದ ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಈ ಕ್ಷೇತ್ರದ ಜವಾಬ್ದಾರಿಯನ್ನು ಲಖನ್ ಜಾರಕಿಹೊಳಿ ಅವರಿಗೆ ವಹಿಸಿಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಶಾಸಕ ರಮೇಶ್ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಡ್ತಾರೆ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಾರೆ.ಇಲೆಕ್ಷನ್ ಮುಗಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಧಿಕೃತವಾಗಿ ಬಿಜೆಪಿ ಸೇರ್ತಾರೆ.ಇವರ ಜೊತೆ ಹತ್ತಾರು ಜನ ಕಾಂಗ್ರೆಸ್ ಸೇರ್ತಾರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ,ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ ಎನ್ನುವ ಸುದ್ಧಿ ಕೇವಲ ಗೋಕಾಕ ಕ್ಷೇತ್ರದಲ್ಲಿ ಅಷ್ಡೇ ಅಲ್ಲ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದು ಇದು ನಿಜವಾದರೆ ಗೋಕಾಕಿನ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರ ಕಥೆ ಏನು ? ಎನ್ನುವ ಚರ್ಚೆಯೂ ಈಗ ಗೋಕಾಕಿನಲ್ಲಿ ಆರಂಭವಾಗಿದೆ
ಅಶೋಕ ಪೂಜಾರಿ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಯಾಗಿ ಒಂದು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ದೆ ಮಾಡಿ ಸೋತಿದ್ದ ಅಶೋಕ ಪೂಜಾರಿ ಗೋಕಾಕಿನ ಬಿಜೆಪಿ ಮುಖಂಡರಾಗಿ ಕೆಲಸ ಮಾಡುತ್ತಿರುವಾಗಲೇ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುತ್ತಿರುವ ಸುದ್ಧಿ ಅಶೋಕ ಪೂಜಾರಿ ಅವರ ನಿದ್ದೆಗೆಡಿಸಿರುವದು ಸತ್ಯ
ಈ ಕುರಿತು ಅಶೋಕ ಪೂಜಾರಿಯವರನ್ನು ವಿಚಾರಿಸಿದಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ ನಿಷ್ಠೆಯಿಂದ ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ ಆದರೆ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಒಂದು ವೇಳೆ ತಮಗೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ ತಮ್ಮ ಬೆಂಬಲಿಗರ ,ಹಿರಿಯರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅಶೋಕ ಪೂಜಾರಿ ತಿಳಿಸಿದ್ದಾರೆ