ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮೋಬೈಲ್ ಎಟಿಎಂ ಸೇವೆ ಗುರುವಾರದಿಂದ ಆರಂಭವಾಗಿದೆ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬೆಳಗಾವಿಯಲ್ಲಿ ಎಟಿಎಂ ಸೇವೆಯನ್ನು ಉದ್ಘಾಟಿಸಿದರು
ಸುಸಜ್ಜಿತವಾದ ವಾಹನದಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ ಸರ್ವರ್ ಗಾಗಿ ವಾಹನದಲ್ಲಿಯೇ ದೊಡ್ಡ ಏರಿಯಲ್ ಅಳವಡಿಸಲಾಗಿದೆ ಎಟಿಎಂ ಯಂತ್ರದಲ್ಲಿ ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಹಾಕಲಾಗಿದೆ
ಯಾವ ಹಳ್ಳಿಗಳಲ್ಲಿ ಎಟಿಎಂ ಇಲ್ಲವೋ ಆ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಮೋಬೈಲ್ ಎಟಿಎಂ ಸಂಚರಿಸಲಿದೆ ಈ ಸಂಧರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬೆಳಗಾವಿ ಹಾಗು ಬಾಗಲಕೋಟೆ ಜಿಲ್ಲೆಗಳಲ್ಲಿ ಮೋಬೈಲ್ ಎಟಿಎಂ ಸೇವೆಯನ್ನು ಆರಂಭಿಸಲಾಗಿದೆ ಎಟಿಎಂ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ ಹಳ್ಳಿಯ ಜನರ ಮನೆ ಬಾಗಿಲಿಗೆ ಬ್ತಾಂಕಿನ ಸೇವೆ ಒದಗಿಸುವ ಉದ್ದೇಶ ನಮ್ಮದಾಗಿದೆ ಮೂರು ತಿಂಗಳಲ್ಲಿ ಯಾವುದಾದರೊಂದು ಹಳ್ಳಿಯನ್ನು ದತ್ತು ಪಡೆದು ಆ ಹಳ್ಳಿಯನ್ನು ಕ್ಯಾಶಲೆಸ್ ಹಳ್ಳಿಯನ್ನಾಗಿ ಪರಿವರ್ತಿಸುವ ಸಂಕಲ್ಪ ಮಾಡಲಾಗಿದೆ ಎಂದು ರವೀಂದ್ರ ಹೇಳುದರು
ನಬಾರ್ಡ ಬ್ಯಾಂಕಿನ ಅಧಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ನಗರದ ಸಾರ್ವಜನಿಕರು ಈ ಸಂಧರ್ಭದಲ್ಲಿ ಮೋಬೈಲ್ ಎಟಿಎಂ ಸೇವೆಯ ಲಾಭ ಪಡೆದುಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ