ಬೆಳಗಾವಿ- ಖಾನಾಪೂರದ ಅವರೊಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ನಿನ್ನೆ ರಾತ್ರಿ ಕುರಿ ಬಲಿ ಪಡೆದಿದ್ದ ಚಿರತೆ ಇಂದು ಬೆಳಿಗ್ಗೆ ಯುವಕನ ಮೇಲೆ ದಾಳಿ ಮಾಡಿದ್ದು ಯುವಕ ಬಚಾವ್ ಆದ ಘಟನೆ ನಡೆದಿದೆ.
ಹೊಲಕ್ಕೆ ಹೋಗಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ನಿನ್ನೆಯಷ್ಟೇ ಕುರಿಯ ಮೇಲೆ ದಾಳಿ ಮಾಡಿದ್ದ ಈ ಚಿರತೆ ಇಂದು ಅವರೊಳ್ಳಿಯಲ್ಲಿ ಯುವಕನ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್ ಚಿರತೆಯಿಂದ ತಪ್ಪಿಸಿಕೊಂಡು ಯುವಕ ಬಚಾವ್ ಆಗಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುವಾಗ ಚಿರತೆ ದಾಳಿ ಮಾಡಿದೆ ಎಂದು ಶ್ರೀಶೈಲಗೌಡ ಪಾಟೀಲ ಎಂಬಾತ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ಕಟ್ಟಿಗೆಯಿಂದ ಚಿರತೆಗೆ ಹೊಡೆದು ಚಿರತೆಯಿಂದ ತಪ್ಪಿಸಿಕೊಂಡಿರುವದಾಗಿ ಅವರೊಳ್ಳಿ ಗ್ರಾಮದ ಈ ಯುವಕ ಮಾಹಿತಿ ನೀಡಿದ್ದಾನೆ.ಗ್ರಾಮದಲ್ಲೇ ಠಿಕಾಣಿ ಹೂಡಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಹಿಡಿಯಲು ಬೋಣಿ ಇಟ್ಟು ಚಿರತೆಗಾಗಿ ಕಾಯುತ್ತಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನಿಸಿ ಓಡಾಡ್ತಾ ಇರುವ ಚಿರತೆ ಅವರೊಳ್ಳಿ ಗ್ರಾಮದಲ್ಲಿ ಲಾಕ್ ಡೌನ್ ಬಿಗಿಗೊಳಿಸಿದ್ದು ನಿಜ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ