ಬೆಳಗಾವಿ-ಆಡ ಮುಟ್ಟದ ಸೊಪ್ಪಿಲ್ಲ ಬಾಬಾಗೌಡರು ಸೇರ್ಪಡೆಯಾಗದ ರಾಜಕೀಯ ಪಕ್ಷವೇ ಉಳಿದಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಸೇರ್ಪಡೆಯಾಗಿ ದೇಶ ಸಂಚಾರ ಮಾಡಿ ಎಲ್ಲ ಪಕ್ಷಗಳಲ್ಲಿ ತೊಂದರೆ ಅನುಭವಿಸಿ ಹಳೆಯ ಗಂಡನ ಪಾದವೇ ಗತಿ ಎಂದು ಖಾತ್ರಿಯಾದ ಮೇಲೆ ಕೇಂದ್ರದ ಮಾಜಿ ಸಚಿವ ಬಾಬಾಗೌಡಾ ಪಾಟೀಲ ಮತ್ತೆ ರೈತ ಸಂಘಣೆಯತ್ತ ಮುಖ ಮಾಡಿದ್ದಾರೆ
ಸೋಮವಾರ ನೂರಾರು ರೈತರೊಂದಿಗೆ ಬೆಳಗಾವಿ ನಗರದಲ್ಲಿ ಮೆರವಣಿಗೆ ನಡೆಸಿ ಅಖಂಡ ಕರ್ನಾಟಕ ರೈತ ಸಂಘಟಣೆಯ ಹೆಸರಿನಿಲ್ಲಿ ಪ್ರತಿಭಟನೆ ನಡೆಸಿ ಬೆಳಗಾವಿಯಲ್ಲಿ ಗೌಡರು ತಮ್ಮ ಗತ್ತು ತೋರಿಸಿದರು
ಅದೇ ಹಳೇಯ ಸ್ಟೈಲ್ ನಲ್ಲಿ ಚಕ್ಕಡಿ ಏರಿ ಸರ್ದಾರ್ ಮೈದಾನದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಬಾಬಾಗೌಡರು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು
ರೈತರು ಸ್ವಾಭಿಮಾಗಳು ಬೇಡಿ ತಿನ್ನುವ ಸಂಸ್ಕøತಿ ರೈತರದಲ್ಲ ಇತರರಿಗೂ ನೀಡಿ ತಿನ್ನುವ ಸಂಸ್ಕøತಿ ರೈತರದ್ದು ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ.ರೈತರು ಬಂಡೆದ್ದರೆ ಇವರೆಲ್ಲರು ತಮ್ಮ ನೆಲೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಬಾಬಾಗೌಡರು ಎಚ್ಚರಿಕೆ ನೀಡಿದರು
ಬಾಬಾಗೌಡರು ನೆಪ ಮಾತ್ರಕ್ಕೆ ರೈತರ ಪರವಾಗಿ ಹೋರಾಟ ನಡೆಸಿದ್ದರು ಆದರೆ ಹೋರಾಟದ ಹಿಂದೆ ಅವರ ಉದ್ದೇಶವೇ ಬೇರೆಯಾಗಿತ್ತು ರಾಜಕೀಯ ಕ್ಷೇತ್ರದಲ್ಲಿ ನಾನು ಇನ್ನೂ ಜೀವಂತವಾಗಿದ್ದೇನೆ ಮತ್ತೆ ರೈತರನ್ನು ಸಂಘಟಿಸಿ ಕಿತ್ತೂರ ಕ್ಷೇತ್ರದಿಂದ ಡಿಬಿ ಇನಾಮದಾರ ವಿರುದ್ಧ ಸೆಡ್ಡ ಹೊಡೆಯುತ್ತೇನೆ ಅನ್ನವಂತಿತ್ತು ಗೌಡರ ಹೋರಾಟ.
ಈ ಸಂದೇಶವನ್ನು ಜಿಲ್ಲೆಯ ಜನರಿಗೆ ಕೊಡುವದಕ್ಕಾಗಿಯೇ ಅವರು ಬೆಳಗಾವಿ ನಗರದಲ್ಲಿ ನೂರಾರು ರೈತರನ್ನು ಸಂಘಟಿಸಿ ಮೆರವಣಿಗೆ ನಡೆಸಿ ಹಳೆಯ ಗತ್ತಿನಲ್ಲಿ ಭಾಷಣ ಬಿಗಿದು ತಮ್ಮ ಬಲ ಪ್ರದರ್ಶನ ಮಾಡಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ