ಕಿತ್ತೂರ ಎಕ್ಸಪ್ರೆಸ್ ನಲ್ಲಿ ಬಾಬಾಗೌಡ್ರನ್ನು ಓವರ್ ಟೇಕ್ ಮಾಡಿದ ಬಾ..ಬಾ..ಸಾಹೇಬ …!!!!

ಬೆಳಗಾವಿ- ಕಿತ್ತೂರ ಕ್ಷೇತ್ರದ ರಾಜಕೀಯ ಕಿತ್ತಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ ಕಾಂಗ್ರೆಸ್ ಟಿಕೆಟ್ ಡಿಬಿ ಇನಾಮದಾರಗೆ ಫಿಕ್ಸ ಆಗಿದೆ ಜೆಡಿಎಸ್ ಟಿಕೆಟ್ ಬಾಬಾಗೌಡ್ರ ಕೈತಪ್ಪಿದ್ದು ಬಾಬಾಸಾಬ ಪಾಟೀಲ ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಳೆದ ಒಂದು ವಾರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಹೈಡ್ರಾಮಾ ನಡೆದಿತ್ತು ಟಿಕೆಟ್ ಗಾಗಿ ಡಿಬಿ ಇನಾಮದಾರ ಹಾಗು ಬಾಬಾಸಾಬ ಪಾಟೀಲ ನಡುವೆ ಗುದ್ದಾಟ ನಡೆದಿತ್ತು ನಿನ್ನೆ ರಾತ್ರಿ ನಡೆದ ಅಚ್ಚರಿಯ ಬೆಳವಣಿಗೆ ನಡೆದು ಕೈ ಟಿಕೆಟ್ ಡಿಬಿ ಪಾಲಾಗಿದ್ದರಿಂದ ಬಾಬಾಸಾಹೇಬ್ ಗೌಡ್ರ ಮನೆಯ ಬಾಗಿಲು ತಟ್ಟಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ

ಈ ಮೊದಲು ಕಿತ್ತೂರ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಾಬಾಗೌಡ್ರಿಗೆ ಫಿಕ್ಸ ಆಗಿತ್ತು ಈ ವಿಷಯವನ್ನು ಸ್ವತಹ ಬಾಬಾಗೌಡ್ರು ಪ್ರೆಸ್ ಮೀಟ್ ಮಾಡಿ ಹೇಳಿಕೊಂಡಿದ್ದರು ಆದ್ರೆ ಬಾಬಾಸಾಬ ಪಾಟೀಲರು ಬಾಬಾಗೌಡ್ರರನ್ನು ಓವರ್ ಟೇಕ್ ಮಾಡಿ ದೇವೇಗೌಡ್ರ ಮನೆ ಮುಟ್ಟುವಲ್ಲಿ ಸಫಲರಾಗಿದ್ದಾರೆ
ಕಿತ್ತೂರ ಬಿಜೆಪಿ ಕಿತ್ತಾಟ ಮುಂದುವರೆದಿದ್ದು ಬಿಜೆಪಿ ಮಾಜಿ ಶಾಸಕ ಸುರೇಶ ಮಾರಿಹಾಳ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗುವ ಮುನ್ಸೂಚನೆ ನೀಡಿದ್ದಾರೆ

Check Also

ಹೊಟೇಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯ ಮರ್ಡರ್

ಬೆಳಗಾವಿ-ಹೊಟೆಲ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯ ಬರ್ಬರ ಹತ್ಯೆ‌ ಮಾಡಿದ ಘಟನೆ ಮಂಗಳವಾರ ರಾತ್ರಿ‌ಬೆಳಗಾವಿಯ ಸದಾಶಿವ ನಗರದ …

Leave a Reply

Your email address will not be published. Required fields are marked *