ಬೆಳಗಾವಿ-ವೀರರಾಣಿ ಕಿತ್ರೂರ ಚನ್ನಮ್ಮಾಜಿಯ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ರಾಜಕೀಯ ಕ್ರಾಂತಿ ನಡೆದಿದೆ ಕಿತ್ತೂರ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಕಿತ್ತಾಟ ನಡೆದು ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿ ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ
ಕಾಂಗ್ರೆಸ್ ಟಿಕೆಟ್ ಸಿಗೋದಿಲ್ಲ ಎಂಬುದು ಖಾತ್ರಿಯಾದ ಮೇಲೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಲು ನಿರ್ಧರಿಸಿರುವ ಬಾಬಾಸಾಹೇಬ ಪಾಟೀಲ ಫೆಬ್ರವರಿ 10 ರಂದು ಕಿತ್ತೂರ ಕ್ಷೇತ್ರದ ಸಂಪಗಾಂವ ಗ್ರಾಮದಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ
ಫೆಬ್ರುವರಿ 10 ರಂದು ಮದ್ತಾಹ್ನ ಮೂರು ಘಂಟೆಗೆ ಸಂಪಗಾಂವ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಬಾಸಾಹೇಬ ಪಾಟೀಲ ನೂರಕ್ಕೂ ಹೆಚ್ಚು ಗ್ರಾಮಪಂಚಾಯತ ಸದಸ್ಯರು ಕಿತ್ತೂರಿನ ಪಟ್ಟಣ ಪಂಚಾಯತ ಸದಸ್ಯರು ಎಂಕೆ ಹುಬ್ಬಳ್ಳಿಯ ಕೆಲವು ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಬಿಜೆಪಿ ಸೇರಲಿದ್ದಾರೆ
ಕಳೆದ ಎರಡು ವರ್ಷದಿಂದ ಕಿತ್ತೂರ ಕ್ಷೇತ್ರದಲ್ಲಿ ತಮ್ಮದೇ ಆದ ಯುವಕರ ಪಡೆಯನ್ನು ಸಂಘಟಿಸಿರುವ ಬಾಬಾಸಾಹೇಬ ಪಾಟೀಲ ಬಿಜೆಪಿ ಟಿಕೆಟ್ ನೀಡುವ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಜೊತೆ ಹಲವಾರು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಬಿಜೆಪಿ ನಡೆಸುತ್ತಿರುವ ಸಮೀಕ್ಷೆಯಲ್ಲಿ ಬಾಬಾಸಾಹೇಬ ಪಾಟೀಲ ಅವರ ಹೆಸರು ಮುಂಚೂಣಿಯಲ್ಲಿ ಇರುವುದರಿಂದ ಬಿಜೆಪಿ ಬಾಬಾಸಾಹೇಬ್ ಪಾಟೀಲ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಬಾಬಾಸಾಹೇಬ್ ಪಾಟೀಲ್ ಬಿಜೆಪಿ ಟಿಕೆಟ್ ಕನಫರ್ಮ ಮಾಡಿಕೊಂಡೇ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸುದ್ಧಿ ಕಿತ್ತೂರ ಕ್ಷೇತ್ರದಲ್ಲಿ ಸಾಕಷ್ಡು ಪ್ರಚಾರ ಪಡೆದಿದೆ
ಕಿತ್ತೂರ ಶಾಸಕ ಡಿಬಿ ಇನಾಮದಾರ ಮತ್ತು ಬಾಬಾಹಾಹೇಬ ಪಾಟೀಲ ಮಾವ ಅಳಿಯ ಆಗಿದ್ದು ಕಿತ್ತೂರ ಕ್ಷೇತ್ರದಲ್ಲಿ ಈ ಬಾರಿ ಮಾವ ಅಳಿಯನ ನಡುವೆ ರಾಜಕೀಯ ಕದನ ನಡೆಯೋದು ಖಚಿತ
ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಸುರೇಶ ಮಾರಿಹಾಳ ಮಹಾಂತೇಶ ದೊಡಗೌಡ್ರ ಜಗದೀಶ ಶೆಟ್ಟರ್ ಅವರ ಅವರ ಬಲಗೈಬಂಟ ಬಸನಗೌಡ ಸಿದ್ರಾಮಣಿ ಡಾ ಜಗದೀಶ ಹಾರುಗೊಪ್ಪ ಸೇರಿದಂತೆ ಹಲವಾರು ಜನ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ
ಕಿತ್ತೂರ ಕಾಂಗ್ರೆಸ್ ಕಿತ್ತಾಟ ಮುಗಿದ ಮೇಲೆ ಈಗ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿದ್ದು ಜೆಡಿಎಸ್ ಬಾಬಾಗೌಡ ಪಾಟೀಲ ಅವರನ್ನು ಅಥವಾ ಅವರ ಪುತ್ರ ಪ್ರಕಾಶನನ್ನು ಕಣಕ್ಕಿಳಿಸಲು ನಿರ್ದಾರ ಮಾಡಿದೆ ಎಂದು ತಿಳಿದು ಬಂದಿದೆ