Breaking News

ಡಿ ಬಿ ಇನಾಮದಾರ ವಿರುದ್ಧ ಬಾಬಾಸಾಹೇಬ ಪಾಟೀಲ ಸೆಡ್ಡು…ಟಿಕೆಟ್ ಗಾಗಿ ಪಟ್ಟು…!!!

ಇನಾಮದಾರ್ ವಿರುದ್ಧ ಬಾಬಾಸಾಹೇಬ್ ಬಲ ಪ್ರದರ್ಶನ ಮಾಡಿದರು ಇಂದು ನೇಗಿನಹಾಳ ಗ್ರಾಮದಲ್ಲಿ ನಡೆದ ಬಾಬಾಸಾಹೇಬ ಪಾಟೀಲರ ಅಭಿಮಾನಿಗಳ ಸಮಾವೇಶದಲ್ಲಿ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು

ಜನಸಾಮಾನ್ಯರ ಪ್ರೀತಿ ಮಾಡುವ ನಿಜ ಜನನಾಯಕ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ್ ಪಾಟೀಲರನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿ ವಿಜೇತರನ್ನಾಗಿ ಮಾಡಲು ನೇಗಿನಹಾಳ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನ ಬಳಿ ಬಾಬಾಸಾಹೇಬ್ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಬೃಹತ್ ಸಭೆಯಲ್ಲಿ ಒಕ್ಕೊರಲ ನಿರ್ಧಾರ ತೆಗೆದುಕೊಳ್ಳಲಾಯಿತು.

ಪರೋಪಕಾರಿ, ಸ್ನೇಹಜೀವಿ, ಎಲ್ಲರ ಜೊತೆಗೂಡಿ ಬೆರೆಯುವ ಇವರನ್ನು ತನು,ಮನ ಮತ್ತು ಧನದಿಂದ ಬೆಂಬಲಿಸಿ ಆಯ್ಕೆ ಮಾಡಬೇಕು ಎಂದು ಸಭೆಯಲ್ಲಿ ಮಾತನಾಡಿದವರೆಲ್ಲ ಘೋಷಿಸಿದರು.

ಬೈಲಹೊಂಗಲ ಆರಾದ್ರಿಮಠದ ಮಹಾಂತೇಶ ಶಾಸ್ತ್ರೀಜಿ ಮಾತನಾಡಿ ಜನಸಾಮಾನ್ಯರ ಜೊತೆ ಬೆರೆಯುವ ಸ್ವಭಾವ ಬಾಬಾಸಾಹೇಬರದು. ಆ ಪಕ್ಷ, ಈ ಪಕ್ಷ, ಈ ಜಾತಿ ಎಂಬ ಭೇದ ನಮಗಿಲ್ಲ.
ಯಾವುದೇ ಪಕ್ಷದ ಪರವಾಗಿ ಆಯ್ಕೆಯಾದರೆ ಕೇವಲ 5ವರ್ಷ ಇರಬಹುದು. ಆದರೆ ಆಭಿಮಾನಿ ಬಳಗದಿಂದ ಆಯ್ಕೆಯಾದರೆ ಕೊನೆಯ ವರೆಗೂ ಶಾಸಕರಾಗಿ ಉಳಿಯುತ್ತಾರೆ ಎಂದು ಇಂಗಿತ ವ್ಯಕ್ತಪಡಿಸಿದರು.
ಅದೃಶ್ಯ ಗದ್ದಿಹಳ್ಳಿಶೆಟ್ಟಿ ಮಾತನಾಡಿ ಕಿತ್ತೂರು ಕ್ಷೇತ್ರದ ಕೊಳೆ ತೊಳೆಯಲು ಬಾಬಾಸಾಹೇಬರಂಥ ನಾಯಕರು ಇಂದು ಬೇಕಾಗಿದ್ದಾರೆ. ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿ ಆಯ್ಕೆಯಾಗಿ ಬಂದರೆ ಕ್ಷೇತ್ರ ಸಮಗ್ರ ಅಭಿವೃದ್ಧಿ ಕಾಣುವುದರಲ್ಲಿ ಅನುಮಾನವಿಲ್ಲ. ಇವರ ಹಿಂದೆ ದೇವಿಶಕ್ತಿಯಾಗಿ ಪತ್ನಿ ರೋಹಿಣಿಯವರು ನಿಂತಿರುವುದರಿಂದ ಈ ಆಯ್ಕೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫಕ್ರುಸಾಬ್ ನದಾಫ್ ಮಾತನಾಡಿ, ಮುಂದಿಟ್ಟ ಹೆಜ್ಜೆ ಹಿಂದಡಬೇಡಿ. ನಿಮ್ಮ ಅಭಿಮಾನಿ ಬಳಗದ ಜೊತೆಗೆ ನಾವಿದ್ದೇವೆ. ಒಳ್ಳೆಯ ಮನೆತನದವರಿದ್ದೀರಿ. ನಿಮ್ಮನ್ನು ಆಯ್ಕೆ ಮಾಡಿ ತರುತ್ತೇವೆ ಎಂದು ಅಭಯ ನೀಡಿದರು.
ದೇವಗಾಂವ ಚಂದ್ರಗೌಡ ಪಾಟೀಲ ಮಾತನಾಡಿ ಇನ್ಮೇಲೆ ಯಾವುದೇ ಪಕ್ಷದ ಕಡೆಗೆ ಹೊರಳಿ ನೋಡುವುದು ಬೇಡ. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಒಳ್ಳೆಯದು. ಕೊಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಿ, ನಿಮ್ಮ ಜೊತೆ ನಾವಿದ್ದೇವೆ. ಕಾಂಗ್ರೆಸ್ ಪಕ್ಷ ತೊರೆದು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಘೋಷಿಸಿದರು.
ಶಂಕರ ಗುಡಸ, ಗೀತಾ ಖಂಡ್ರೆ, ಅನಿಲ ಎಮ್ಮಿ ಮುಂತಾದವರು ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ, ಎಪಿಎಂಸಿ ಅಧ್ಯಕ್ಷ ಸಂಗನಗೌಡ ಪಾಟೀಲ, ಕಾಶೀನಾಥ್ ಇನಾಮದಾರ, ಕಿತ್ತೂರು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಕಿರಣ ವಾಳದ, ಸುನೀಲ ಘೀವಾರಿ, ಚನಗೌಡ ಪಾಟೀಲ, ನಾಗರಾಜ ದೇಸಾಯಿ, ರಮೇಶ ದೇಸಾಯಿ, ಅರವಳ್ಳಿಯ ಪಾಟೀಲ, ತಾ. ಪಂ. ಸದಸ್ಯ ಮುದಕಪ್ಪ ಮರಡಿ, ಪಾಟೀಲ ಮನೆತನದ ಪರಿವಾರದವರು, ಅಭಿಮಾನಿ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬ್ಯಾಲೆಟ್ ಪೇಪರ್‍ನಲ್ಲಿ ಹೆಸರು ಗ್ಯಾರಂಟಿ
ನೇಗಿನಹಾಳ: ಅಭಿಮಾನಿ ಬಳಗದವರ ಪ್ರೀತಿ, ವಿಶ್ವಾಸಕ್ಕೆ ಮೂಕ ವಿಸ್ಮಿತರಾದ ಬಾಬಾಸಾಹೇಬ್ ಪಾಟೀಲ ಮಾತನಾಡಿ ಇಂದಿನ ಸಭೆಗೆ ಬಂದಿರುವ ಅಭಿಮಾನಿಗಳ ಪ್ರೀತಿ ದೊಡ್ಡದು. ನಿಮ್ಮ ಆಶೀರ್ವಾದ ಇದ್ದರೆ ಸಾಕು. ಪಕ್ಷ ಟಿಕೆಟ್ ಕೊಡಲಿ, ಬಿಡಲಿ ಈ ಬಾರಿ ಚುನಾವಣೆಯ ಬ್ಯಾಲೆಟ್ ಪೇಪರ್‍ನಲ್ಲಿ ಖಂಡಿತ ನನ್ನ ಹೆಸರು ಇರೋದು ಗ್ಯಾರಂಟಿ ಎಂದು ಬಾಬಾಸಾಹೇಬ ಪಾಟೀಲ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *