ಬೆಂಗಳೂರು- ಪತ್ರಕರ್ತರು ಏನ್ ಕೇಳಬೇಕೋ ಅದನ್ನ ಕೇಳಬೇಕು,ಯಾವುದೋ ಚಿಂದಿಚೋರನ ತಂದೂ ಆ ಹುಲಿ,ಈ ಹುಲಿ ಅನ್ನಬ್ಯಾಡ್ರಿ ನೀವ್ ಹಂಗ್ ಅಂದ್ರ ಜನ ತಿಳ್ಕೋತಾರ್ ನೀವೆಲ್ಲ ಯಾರ್ಯಾರ್ ಕಡೆದವರು ಅಂತ ಗೊತ್ತಿಲ್ಲ.ಅದಕ್ಕೆಲ್ಲ ನಾನು ಉತ್ತರ ಕೊಡೋದಿಲ್ಲ ಅಂತ ಬಸನಗೌಡ ಯತ್ನಾಳ್ ಮಾದ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ವಿಜಯೇಂದ್ರ ಅಧ್ಯಕ್ಷರಾದಬಳಿಕ ಯಡಿಯೂರಪ್ಪ ನಿಮ್ಮ ಜೊತೆ ಮಾತಾಡಿದ್ರಾ.? ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಅರಿಗೆ ಬೇಕಾದಾಗ ಮಾತಾಡ್ತಾರೆ,ಯಾವಾಗ ತುಳೀಬೇಕು ಆವಾಗ ತುಳೀತಾರೆ. ನಾನ್ ಏನೋ ಮಾತಾಡೋದಿದ್ರೆ ಅಮೀತ್ ಶಾ,ನಡ್ಡಾ,ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತಾಡ್ತೇನ್ ಎಂದು ಯತ್ನಾಳ್ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಸ್ಥಾನಮಾನ ಸಿಗಲೇಬೇಕು, ಒಂದು ಹಿಂದುತ್ವ,ಇನ್ನೊಂದು ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಈ ಎರಡೂ ವಿಚಾರದಲ್ಲೂ ನಾನು ರಾಜಿ ಆಗೋದಿಲ್ಲ, ಯಾಕ್ರೀ ಎಲ್ಲಾರೂ ಬೆಂಗಳೂರಿನವರೇ ಆಗಬೇಕಾ? ಉತ್ತರ ಕರ್ನಾಟಕದವರು ಬೆಂಗಳೂರಿಗೆ ಹೋಗಿ ಅವರ ಮನೆ ಕಾಯಬೇಕಾ ? ಸಾಹೇಬ್ರು ರೆಡಿ ಆಗ್ತಾ ಇದ್ದಾರೆ,ಜಳಕಾ ಮಾಡ್ತಾ ಇದ್ದಾರೆ,ಅಂತಾ ಹೇಳೋದನ್ನು ಕೇಳಬೇಕಾ ? ಅದೆಲ್ಲಾ ನಡೆಯೋದಿಲ್ಲ, ಎಲ್ಲರೂ ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಡ್ಯ,ಮೈಸೂರು ಕೋಲಾರ್ ದಲ್ಲಿ ಇವ್ರು ಎಷ್ಟು ಸೀಟ್ ತಂದ್ರು ? ವಿರೋಧ ಪಕ್ಷದ ನಾಯಕನ ಸ್ಥಾನ ಉತ್ತರ ಕರ್ನಾಟಕದವರಿಗೇ ಕೊಡಬೇಕು ಯಾಕ್ ಕೊಡಬಾರ್ದು ? ಅಂತಾ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗಲೇ ಕೆಜಿ ಹಳ್ಳಿಯಲ್ಲಿ ಏನಾಯ್ತು,ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಆಯ್ತು,ಆವಾಗಲೇ ಬುದ್ದಿ ಕಲಿಸಬೇಕಾಗಿತ್ತು ಬುದ್ದಿ ಕಲಿಸಿದ್ರೆ ಬಿಜೆಪಿಗೆ 130 ಸೀಟ್ ಬರ್ತಿದ್ದು ಅಂತಾ ಯತ್ನಾಳ್ ಹೇಳಿದ್ದಾರೆ.