ಬೆಳಗಾವಿ: ಮಹಾದಾಯಿಗಾಗಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೈಲಹೊಂಗಲ ಪಟ್ಟಣದಲ್ಲಿ
ಕಲ್ಲು ತೂರಾಟ ನಡೆದಿದೆ
ಕೆವಿಜಿ ಬ್ಯಾಂಕಗೆ ಪ್ರತಿಭಟನಾಕಾರರಿಂದ ಕಲ್ಲು ತೂರಾಟ ಮಾಡಲಾಗಿದ್ದು ಬ್ಯಾಂಕಿನ ಗಾಜುಗಳು ಪುಡಿಪುಡಿಯಾಗಿವೆ
ಬ್ಯಾಂಕ್ ಬಂದ್ ಮಾಡದ ಕಾರಣ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿ ಯಾದ ಕೆವಿಜೆ ಬ್ಯಾಂಕಿನ ಬಾಗಿಲು ಹಾಗು ಕಿಡಕಿ ಗಾಜುಗಳು ಪುಡಿಪುಡಿಯಾಗಿವೆ
ಬೈಲಹೊಂಗಲದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ
ಅಂಗಡಿ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದ ಅಂಗಡಿಕಾರರು ಮಹಾದಾಯಿಗಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದೆ
ಮಹಾದಾಯಿಗಾಗಿ ಬೈಲಹೊಂಗಲದಲ್ಲಿ ವಿವಿಧ ರೈತ ಸಂಘಟನೆಗಳು ಹಾಗು ಕನ್ನಡಪರ ಸಂಘಟನೆಗಳಿಂದ ಬೃಹತ್ತ ಪ್ರತಿಭಟನೆ ನಡೆದಿದ್ದು ಬೈಲಹೊಂಗಲ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ