ಬೆಳಗಾವಿ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ದೇಶದ ಗಡಿ ಕಾಯಲು ಗಸ್ತು ತಿರುಗುತ್ತಿರುವಾಗ ಊಗ್ರರ ಗುಂಡಿನ ದಾಳಿಗೆ ವೀರ ಮರಣವೊಪ್ಪಿದ ಕಿತ್ತೂರ ತಶಲೂಕಿನ ಬೈಲೂರ ಗ್ರಾಮದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಡಳಿತ ಎಲ್ಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ವೀರ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲುರು ಗ್ರಾಮದ(೫೩ )ವರ್ಷದ ಬಸವಾರಾಜ ಹನುಮಂತಪ್ಪ ಬಜಂತ್ರಿ ಹುತಾತ್ಮನಾದ ಯೋಧ.
ಕಳೆದ ೧೯ ವರ್ಷಗಳಿಂದ ಸಿಆರ್ ಪಿಎಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನೇನು ಹದಿನೈದು ದಿನಗಳಲ್ಲಿ ರಜೆ ಮೇಲೆ ಮನೆಗೆ ಬರುವದಾಗಿ ಕುಟುಂಬದವರಿಗೆ ತಳಿಸಿದ್ದರು ಆದರೆ ವಿದಿ ಆಟ ಬೆರೆನೆ ಆಗಿತ್ತು ಮೃತ ಯೊಧನ ಪಾರ್ಥಿವ ಶರೀರವನ್ನು ಗೋವಾದ ಮೂಲಕ ಸ್ವ ಗ್ರಾಮ ಬೈಲುರಿಗೆ ನಿನ್ನೆ ರಾತ್ರಿ ತರಲಾಗಿತ್ತು
ಯೋಧನ ಕುಟುಂಬಸ್ಥರ ಆಂಕ್ರದನ ಮುಗಿಲು ಮುಟ್ಟಿದ್ದು ಗ್ರಾಮಸ್ಥರಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.ಇನ್ನೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಶಾಲಾ ಮೈದಾನದಲ್ಲಿ ವ್ಯೆವಸ್ಥೆ ಮಾಡಲಾಗಿತ್ತು
ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್ ಜಯರಾಮ್ ಹಾಗೂ ಎಸ್ಪಿ ರವಿಕಾಂತೇಗೌಡ ಸಿ ಆರ್ ಪಿ ಎಫ್ ಎಸ್ಪಿ ಸಂಜೆಯ ತಾಥಾ, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು
ಹುತಾತ್ಮ ಯೋಧನ. ಅಂತ್ಯಕ್ರಿಯೆ ಬೈಲೂರು ಗ್ರಾಮ ಪಂಚಾಯತಿ ಆವರಣದಲ್ಲಿ ವಿಧಿ ವಿದಾನಗಳ ಮೂಲಕ ನೆರೆವೆರಿತು
ಸಾವಿರಾರು ಜನ ಅಭಿಮಾನಿಗಳು ವೀರ ಯೋಧನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು