ಮಂತ್ರಿಗಿರಿಗೆ ಜೋರ್ ದಾರ್ ಲಾಬಿ,ಉಮೇಶ್ ಕತ್ತಿ ಬೆನ್ನಿಗೆ ನಿಂತಿರುವ ಬಾಲಚಂದ್ರ ಜಾರಕಿಹೊಳಿ…!!!!
ಬೆಳಗಾವಿ-ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಚಿವ ಸಂಪುಟದ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯಲು ಇಂದು ಅಥವಾ ನಾಳೆ ದೆಹಲಿಗೆ ತೆರಳಲಿರುವ ಹಿನ್ನಲೆಯಲ್ಲಿ ಮಂತ್ರಿ ಪಟ್ಟಕ್ಕಾಗಿ ಜೋರ್ ದಾರ್ ಲಾಭಿ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯಿಂದ ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಪ್ರಬಲ ನಿಗಮ ಮಂಡಳಿಗಳನ್ನು ನೀಡಿ ,ಬೆಳಗಾವಿ ಜಿಲ್ಲೆಯ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಮುಂದಿನ ಸಚಿವ ಸಂಪುಟದ ವಿಸ್ತರಣೆ ಯಲ್ಲಿ ಸಚಿವ ಸ್ಥಾನ ನೀಡಲು ಸಿಎಂ ಯಡಿಯೂರಪ್ಪ ಅವರು ಉತ್ಸುಕ ರಾಗಿದ್ದು ಬೆಳಗಾವಿ ಜಿಲ್ಲೆಯ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಮೇಶ್ ಕತ್ತಿ ಅವರ ಬೆನ್ನಿಗೆ ನಿಂತು ಉಮೇಶ್ ಕತ್ತಿ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಬಿಜೆಪಿ ಹೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ
ಶ್ರೀಮಂತ ಪಾಟೀಲ ,ಮತ್ತು ಮಹೇಶ ಕುಮಟೊಳ್ಳಿ ಅವರನ್ನು ನಿಗಮ ಮಂಡಳಿಗಳನ್ನು ಕೊಟ್ಟು ಅವರನ್ನು ಒಪ್ಪಸಿ ಅವರು ಸ್ವ ಖುಷಿಯಿಂದ ನಿಗಮ ಮಂಡಳಿಗಳ ಸ್ಥಾನಕ್ಕೆಒಪ್ಪಿಕೊಂಡರೆ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ಕಸರತ್ತು ಬಿಜೆಪಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಉಮೇಶ್ ಕತ್ತಿ ಅವರ ಜೊತೆ ಮುರಗೇಶ್ ನಿರಾಣಿ,ಮತ್ತು ಅರವಿಂದ ಲಿಂಬಾವಳಿ ಅವರು ಸಚಿವರಾಗಲು ಜೋರದಾರ್ ಲಾಬಿ ನಡೆಸಿರುವದು ಈಗ ಗುಟ್ಟಾಗಿ ಉಳಿದಿಲ್ಲ ಉಪ ಚುನಾವಣೆಯಲ್ಲಿ ಯಡಿಯೂರಪ್ಪನವರ ಪರವಾಗಿ ಜೋರ್ ದಾರ್ ಬ್ಯಾಟಿಂಗ್ ನಡೆಸಿದ ಬಸಗೌಡ ಪಾಟೀಲ ಯತ್ನಾಳ ಅವರಿಗೂ ಮಂತ್ರಿ ಸ್ಥಾನ ಸಿಕ್ಕರೆ ಅಚ್ಚರಿ ಪಡಬೇಕಾಗಿಲ್ಲ.
ಒಟ್ಟಾರೆ ಮುಂದಿನ ಸಚಿವ ಸಂಪುಟದ ವಿಸ್ತರಣೆಯಲ್ಲಿ ಬೆಳಗಾವಿ ಜಿಲ್ಲೆ ಬಂಪರ್ ಲಾಟರಿ ಹೊಡೆಯಲಿದೆ ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ ಸವದಿ,ಮತ್ತು ಶಶಿಕಲಾ ಜೊಲ್ಲೆ ಮಂತ್ರಿಯಾಗಿದ್ದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ,ಮತ್ತು ಮತ್ತು ಉಮೇಶ್ ಕತ್ತಿ ಅವರು ಸಚಿವ ಸ್ಥಾನ ಪಡೆಯುತ್ತಾರೆ,ರಮೇಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನದ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ಎಲ್ಲ ಲಕ್ಷಣಗಳೂ ಕಂಡು ಬಂದಿವೆ .