ಬೆಳಗಾವಿ- ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮೊದಲು ಬಾಂಗ್ಲಾ ದೇಶೀಯರನ್ನು ಹಿಡಿಯಿರಿ ಎನ್ನುವ ಒತ್ತಾಯ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ಪೋಲೀಸರು ಬೆಳಗಾವಿಯಲ್ಲಿ ಒಟ್ಟು 7 ಜನ ಬಾಂಗ್ಲಾ ದೇಶೀಯರನ್ನು ಹಿಡಿಯುವ ಮೂಲಕ ಬಾಂಗ್ಲಾ ದೇಶೀಯರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ
ದೇಶದ ಗಡಿಯಲ್ಲಿ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿಯಲ್ಲಿ ನೆಲೆಸಿದ್ದ 7 ಬಾಂಗ್ಲಾ ದೇಶೀಯರನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ
ಬೆಳಗಾವಿ ಪೊಲೀಸರಿಂದ ಓರ್ವ ಮಹಿಳೆ ಸೇರಿ ಏಳು ಜನ ಬಾಂಗ್ಲಾ ದೇಶದ ಪ್ರಜೆಗಳ ಬಂಧನ. ಮಾಡಲಾಗಿದೆ
ಅಂಜುಬೇಗ್ 32, ಹಫಿಜುಲ್ಲಾ ಇಸ್ಲಾಂ 20, ಹಕೀಬ್ 20, ಅಬ್ದುಲ್ ನಿಹಾರ ಅಲಿ ಗಾಜಿ 60, ಅನ್ವರ್ ಸದ್ದಾರ್ 21, ರೋಹನ್ 21, ಮಹಮ್ಮದ್ ಅಲ್ವಿನ್ ಶೌಫಿವುದ್ದಿನ್ ಬೇಪಾರಿ 26 ಬಂಧಿತ ಬಾಂಗ್ಲಾ ನಿವಾಸಿಗಳಾಗಿದ್ದಾರೆ
ಮಹಮ್ಮದ್ ಬೇಪಾರಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಪ್ರಯಾಣ ಬೆಳೆಸಲು ಯತ್ನಿಸುತ್ತಿದ್ದಾಗ ಪೂಣೆ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ ಹಿನ್ನಲೆಯಲ್ಲಿ ಬೆಳಗಾವಿಯ ಇವರ ಜಾಲ ಪತ್ತೆಯಾಗಿದೆ
ಮಹಮ್ಮದ್ ಬೇಪಾರಿ ನೀಡಿದ ಮಾಹಿತಿ ಮೇಲೆ ಉಳಿದವರನ್ನ ಬಂಧಿಸಿದ ಬೆಳಗಾವಿ ಮಾಳಮಾರುತಿ ಪೊಲೀಸರು. ಇನ್ನು ಹಲವರಿ ಅಕ್ರಮವಾಗಿ ವಾಸಿಸಿರುವ ಶಂಕೆ ವ್ಯೆಕ್ತಪಡಿಸಿ ವಿಚಾರಣೆ ಮುಂದುವರೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ