ಬೆಳಗಾವಿ- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜಿಪಿ ರೈತ ಮೋರ್ಚಾ ವತಿಯಿಂದ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮಣಿ ನೇತ್ರತ್ವದಲ್ಲಿ ಇಂದು ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಲಾಯಿತು
ಮಹದಾಯಿ ವಿಚಾರ ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದುಆರೋಪಿಸಿ ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಲಾಯಿತು ಮೋರ್ಚಾದ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ ನೇತ್ರತ್ವದಲ್ಲಿ ಮುತ್ತಿಗೆ ಯತ್ನಿಸಲಾಯಿತು
ನಗರದ ಚನ್ನಮ್ಮ ವೃತ್ತದಿಂದ ಕಾಂಗಸ್ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ನಗರದ ಕ್ಲಬ್ ರಸ್ತೆಯಲ್ಲಿ ಇರುವ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಚೇರಿಯತ್ತ ತಡರಳುತ್ತಿರುವಾಗ
ರಸ್ತೆ ಮಧ್ಯೆ ಪ್ರತಿಭಟನಾಕಾರರನ್ನ ಪೊಲೀಸರು ತಡೆದಾಗ
ಪ್ರತಿಭಟನಾಕಾರ ಪೊಲೀಸ್ ಮಧ್ತೆ ನುಕುನುಗ್ಗಲು ಉಂಟಾಯಿತು ಪೋಲೀಸರ ಬ್ಯಾರೀಕೇಟ್ ತಳ್ಳಿ ಕಾಂಗ್ರೆಸ್ ಕಚೇರಿಯತ್ತ ನುಗ್ಗಲು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಯತ್ನಿಸಿದರು
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯೆಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮಹಾದಾಯಿ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇಲ್ಲ ಮಹಾದಾಯಿ ಮತ್ತು ಕಳಸಾ ಬಂಡೂರಿ ವಿಚಾರದಲ್ಲಿ ಒಂದು ಕಡ್ಡಿಯನ್ನು ಅಲುಗಾಡಿಸದ ಕಾಂಗ್ರೆಸ್ ಪಕ್ಷ ಏಜೆಂಟರ ಮುಖಾಂತರ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇವಲ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಸಿದ್ರಾಮನಿ ಯಡಿಯೂರಪ್ಪ ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಜಲಸಂಪನ್ಮೂಲ ಸಚಿವ ಈಶ್ವರಪ್ಪ 125 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿ ಶೇ 75 ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ ಆದರೆ ಕಾಂಗ್ರೆಸ್ ಮಾಡಿದ್ದಾದರೂ ಏನು ಎಂದು ಸಿದ್ರಾಮನಿ ಪ್ರಶ್ನಿಸಿದರು
ನೂರಕ್ಕು ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ ಪೋಲೀಸರು ನಂತರ ಬಿಡುಗಡೆ ಮಾಡಿದರು
ಜಿಲ್ಲಾಧ್ಯಕ್ಷ ಹರಕುಣಿ
ಅನೀಲ ಬೆನಕೆ ರಾಜೀವ ಟೋಪಣ್ಣವರ ದೀಪಕ ಜಮಖಂಡಿ ರಾಜು ಜಿಕ್ಕನಗೌಡ್ರ ಸೇರಿದಂತೆ ಸಾವಿರ ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು