Breaking News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ನಿರ್ಣಯ ಕನ್ನಡದ ಮೇಯರ್ ಅವಿರೋಧ ಆಯ್ಕೆ

ಬೆಳಗಾವಿ- ಗಡಿಭಾಗದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಹೊಸ ಇತಿಹಾಸ ನಿರ್ಮಾಣವಾಗಿದೆ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ಬಡದ ನಗರಸೇವಕ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವ ಮೂಲಕ ರಾಜ್ಯದ ಕನ್ನಡಿಗರಿಗೆ ಹೋಳಿ ಹಬ್ಬದ ದಿನ ಸಿಹಿ ಸುದ್ಧಿ ನೀಡಿದ್ದಾರೆ

ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು ಈ ವರ್ಗಕ್ಕೆ ಸೇರಿದ ನಗರ ಸೇವಕರು ಎಂಈಎಸ್ ಗುಂಪಿನಲ್ಲಿ ಇಲ್ಲದಿರುವದರಿಂದ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಕಂಗಾಲಾಗಿದ್ದು ಕನ್ನಡ ಗುಂಪಿನ ಹಿರಿಯ ನಗರ ಸೇವಕ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ

ಮೇಯರ್ ಸ್ಥಾನಕ್ಕೆ ಕನ್ನಡ ಗುಂಪುನಲ್ಲಿ ಒಡಕಾಗಿತ್ತು ಒಂದು ಗುಂಪು ರಿಸಾರ್ಟ್ ಮೊರೆ ಹೋಗಿತ್ತು ಸುಚೇತಾ ಗಂಡಗುದರಿ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದರು ಇಂದು ಬೆಳಿಗ್ಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ನಡೆಸಿದ ಸಂಧಾನ ಸಫಲವಾಗಿ ಸುಚೇತಾ ಗಂಡಗುದರಿ ಅವರು ನಾಮಪತ್ರ ಸಲ್ಲಿಸಲಿಲ್ಲ ಬಸಪ್ಪ ಚಿಕ್ಕಲದಿನ್ನಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು ನಾಮ ಪತ್ರ ಸಲ್ಲಿಸುವ ಸಮಯವೂ ಮುಗಿದಿದ್ದು ಕಣದಲ್ಲಿ ಉಳಿದಿರುವ ಬಸಪ್ಪ ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಉಪಮೇಯರ್ ಸ್ಥಾನ ಓಬಿಸಿ ಮಹಿಳೆಗೆ ಮೀಸಲಾಗಿದೆ ಈ ಸ್ಥಾನಕ್ಕಾಗಿ ಎಂಈಎಸ್ ಗುಂಪಿನಲ್ಲಿ ಕಿತ್ತಾಟ ನಡೆದಿದೆ ಎಂಈಎಸ್ ಗುಂಪಿನ ಮಧುಶ್ರೀ ಪೂಜಾರಿ,ಮೇಘಾ ಹಳದನಕರ,ಮೀನಾಕ್ಷಿ ಚಿಗರೆ ನಾಮಪತ್ರ ಸಲ್ಲಿಸಿದ್ದು ಉಪಮೇಯರ್ ಸ್ಥಾನಕ್ಕೆ ಮಾತ್ರ ಮತದಾನ ನಡೆಯಲಿದ್ದು ಶಾಸಕ ಸಂಬಾಜಿ ಪಾಟೀಲ ನಿರ್ಣಾಯಕರಾಗಿದ್ದಾರೆ

ಒಂದು ಘಂಟೆಗೆ ಮತದಾನದ ನ ಪ್ರಕ್ರಿಯೆ ಆರಂಭವಾಗಲಿದೆ ಚುನಾವಣಾ ಅಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಪಿಎ ಮೇಘನ್ನವರ ಕಾರ್ಯನಿರ್ವಹಿಸುತ್ತಿದ್ದಾರೆ

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *