Breaking News

ಮಾನಿಕ್ ಸರ್ಕಾರಗೆ ಬಸವಶ್ರೀ ಪ್ರಶಸ್ತಿ

ಬೆಳಗಾವಿ: ಈ ಬಾರಿಯ ಬಸವ ಶ್ರೀ ಪ್ರಶಸ್ತಿಗೆ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾನಿಕ್ ಸರ್ಕಾರ ಭಾಜನರಾಗಿದ್ಸಾರೆ

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಕೃಷಿಕ ಹಾಗೂ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಅವರಿಗೆ 2017 ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿಕ ಪ್ರಶಸ್ತಿಯನ್ನು ಜ.15 ರಂದು ಬೆಳಿಗ್ಗೆ 10 ಗಂಟೆಗೆ ಕೂಡಲ ಸಂಗಮದ ಬಸವ ವೇದಿಕೆಯಲ್ಲಿ ನೀಡಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2012 ರಲ್ಲಿ ರಾಜಸ್ಥಾನದ ಜಲತಜ್ಞ ಡಾ.ರಾಜೇಂದ್ರ ಸಿಂಗ್, 2013 ರಲ್ಲಿ ಮಹಾರಾಷ್ಟ್ರದ ಅಣ್ಣಾ ಹಜಾರೆ, 2014 ರಲ್ಲಿ ಮಧ್ಯಪ್ರದೇಶದ ಮೇದಾ ಪಾಟ್ಕರ, 2015 ರಲ್ಲಿ ಮಹಾರಾಷ್ಟ್ರದ ಪುಣೆಯ ಡಾ.ಬಾಬಾ ಅಡಾವೆ ಸದ್ಯ 2017ರಲ್ಲಿ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಅವರಿಗೆ ನೀಡಲು ತೀರ್ಮಾಣಿಸಲಾಗಿದೆ. 2016 ರಲ್ಲಿ ಮಹದಾಯಿ ವಿಚಾರವಾಗಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಇರುವುದರಿಂದ ಅಂದು ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಅವರು ನಮ್ಮ ದೇಶದ ನಂ 1 ಆದರ್ಶ ಮುಖ್ಯಮಂತ್ರಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರು ಗ್ರಾಮೀಣ ಕೃಷಿ-ಕಾರ್ಮಿಕ ವಲಯಕ್ಕೆ ನೀಡಲಾದ ಸೇವೆಗಾಗಿ ಗುರುತಿಸಿ ಈ ಪ್ರಶಸ್ತಿಯನ್ನು ನೀಡಿಲಾಗಿದೆ ಎಂದರು.
ಪ್ರಧಾನ ಸಮಾರಂಭಕ್ಕೆ ರಾಜ್ಯದ ಜನಪ್ರತಿನಿಧಿಗಳು, ಕೃಷಿ ಹಾಗೂ ಕಾರ್ಮಿಕ  ಕ್ಷೇತ್ರದದ ತಜ್ಞರು, ಪ್ರಗತಿ ಪರ ಚಿಂತಕರು, ವಿವಿಧ ಕಾರ್ಮಿಕ ಹಾಗೂ ರೈತ ಸಂಘಟನೆಗಳ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಬೇಕು ಎಂದು ಹೇಳಿದರು.
ಬಸವರಾಜ ರೊಟ್ಟಿ, ಜೆ.ಎಂ.ಪಾಟೀಲ, ಬಸವರಾಜ ಜಕ್ಕಣಗೋಳ, ಸದಾನಂದ ಗುಂಟೆಪ್ಪನವರ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
——————–

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *