ಬೆಳಗಾವಿ- ಯೋಧರು- ಪೋಲೀಸರು ಒಂದು ನಾಣ್ಯದ ಎರಡು ಮುಖಗಳು,ಇಬ್ಬರ ಸೇವೆಯೂ ಅಮೂಲ್ಯವಾಗಿದೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಇಬ್ಬರ ನಡುವೆ ಸಂಘರ್ಷ ನಡೆಯುವದನ್ನು ಯಾರೂ ಬಯಸುವದಿಲ್ಲಿ.ಕರ್ತವ್ಯ ನಿಭಾಯಿಸುವ ಸಂಧರ್ಭದಲ್ಲಿ ಎಡವಟ್ಟು ಆಗಿದ್ದು ನಿಜ. ತಪ್ಪು ಯಾರದು? ಎನ್ನುವ ಚರ್ಚೆ ಬೇಡವೇ ಬೇಡ.ಕೈ..ಕೈ ಮಿಲಾಯಿಸುವ ಮೂಲಕ ಉದ್ಭವಿಸಿದ ಕಲಹ ಪರಸ್ಪರ ಕೈ ಜೋಡಿಸುವ ಮೂಲಕ ಈ ಕಲಹ ಅಂತ್ಯವಾಗಲಿ ಅನ್ನೋದು ಎಲ್ಲರ ಬಯಕೆ..
ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒಬ್ಬ ಜಂಟಲ್ ಮ್ಯಾನ್ ಅದರಲ್ಲಿ ಸಂಶಯವೇ ಇಲ್ಲ ಅವರು ಈ ವಿಷಯದಲ್ಲಿ ತಕ್ಷಣ ಮದ್ಯಸ್ಥಿಕೆ ವಹಿಸಿ ಯೋಧ ಹಾಗು ಪೋಲೀಸರ ನಡುವೆ ನಡೆದ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸಿ,ಯೋಧನ ಮೇಲೆ ಹಾಕಲಾಗಿರುವ ಎಫ ಐ ಆರ್ ರದ್ದು ಪಡಿಸಲಿ.
ಸಿಆರ್‌ಪಿಎಫ್ ಯೋಧ ಹಾಗೂ ಇಬ್ಬರು ಪೋಲೀಸರ ನಡುವೆ ಮಾಸ್ಕ್ ಹಾಕಿಕೊಳ್ಳದ ವಿಚಾರಕ್ಕೆ ಚಿಕ್ಕೋಡಿ ಪಕ್ಕದ ಯಕ್ಸಂಬಾದಲ್ಲಿ ಗಲಾಟೆ ನಡೆದಿತ್ತು ಈ ಗಲಾಟೆ ಈಗ ತಾರಕಕ್ಕೇರಿದೆ.
ಸಿಆರ್‌ಪಿಎಫ್ ಯೋಧನ ಕೈಗೆ ಕೋಳ ಹಾಕಿ ಠಾಣೆಯಲ್ಲಿ ಕೂರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ಯೋಧನ ಜೊತೆ ಈ ರೀತಿ ಪೊಲೀಸರು ನಡೆದುಕೊಳ್ಳುವದು ಸರಿಯಲ್ಲ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 22ರಂದು ಬೆಳಗಾವಿ ಜಿಲ್ಲಾಧಿಕಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಉಗುಳಬಾರದು ಎಂದು ಆದೇಶ ಹೊರಡಿಸಿದ್ದರು. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದರು. ಅದೇ ರೀತಿ ಏಪ್ರಿಲ್ 23ರಂದು ಯಕ್ಸಂಬಾದಲ್ಲಿ ಯೋಧ ಮತ್ತು ಇಬ್ಬರು ಪೋಲೀಸರ ನಡುವೆ ಗಲಾಟೆಯಾಗಿತ್ತು ಇದು ಘಟನೆಯ ವಿವಿರ
ಆದರೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಕರ್ತವ್ಯನಿರತ ಪೊಲೀಸ್ ಪೇದೆಯ ಹೊಟ್ಟೆಗೆ ಒದ್ಡು ಕಾಲರ್ ಹಿಡಿದಿದ್ದಕ್ಕೆ ಯೋಧನನ್ನು ಬಂಧಿಸಲಾಗಿದೆ. ಘಟನೆಯ ಒಂದು ದೃಶ್ಯ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೋಧನ ಮೇಲೆ ಲಾಠಿ ಬೀಸುವ ಮುನ್ನ ಏನೇನು ನಡೆದಿದೆ ಎಂಬ ಬಗ್ಗೆ ಒಂದು ನಿಮಿಷ ಇಪ್ಪತ್ತೇಳು ಸೆಕೆಂಡಿನ ವಿಡಿಯೋ ಹಾಗೂ ಪೇದೆಯ ಹೊಟ್ಟೆ ಮೇಲೆ ಯೋಧ ಒದ್ದಿರುವ ಗುರುತಿರುವ ಫೋಟೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಡಿಜಿಪಿಗೆ ಸಿಆರ್‌ಪಿಎಪ್ ಐಜಿಪಿ ಪತ್ರ
ಸದಲಗಾ ಪೊಲೀಸರಿಂದ ಸಿಆರ್‌ಪಿಎಪ್ ಯೋಧನ ಬಂಧನದ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್‌ಗೆ ಸಿಆರ್‌ಪಿಎಪ್ ಐಜಿಪಿ ಸಂಜಯ್ ಅರೋರಾ ಪತ್ರ ಬರೆದಿದ್ದಾರೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಈ ರೀತಿ ಘಟನೆ ನಡೆಯಬಾರದಿತ್ತು. ಕರ್ನಾಟಕ ಪೊಲೀಸರು ಯೋಧನ ಬಂಧನಕ್ಕೂ ಮುನ್ನ ಸಿಆರ್‌ಪಿಎಫ್ ಅಧಿಕಾರಿಗಳ ಸಂಪರ್ಕಿಸಬೇಕಿತ್ತು. ಸಿಆರ್‌ಪಿಎಫ್ ಒಂದು ಶಿಸ್ತು ಬದ್ಧ ಪಡೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಿ ಎಂದು ಪತ್ರ ಬರೆದಿದ್ದಾರೆ. ಇನ್ನು
ಪ್ರಕರಣದ ಮಾಹಿತಿ ಪಡೆಯಲು ಚಿಕ್ಕೋಡಿಗೆ ಸಿಆರ್‌ಪಿಎಫ್ ಅಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಆರ್‌ಪಿಎಫ್ ಯೋಧ ಮತ್ತು ಪೊಲೀಸ್ ಪೇದೆ ಮಧ್ಯೆ ನಡೆದ ಗಲಾಟೆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ಇಬ್ಬರು ಪೋಲೀಸ್ ಪೇದೆ ಮತ್ತು ಯೋಧನ ನಡುವೆ ನಡೆದ ಈ ಗಲಾಟೆ ಅಂತ್ಯವಾಗಲಿ ,ಈ ಕುರಿತು ಆರೋಪ ಪ್ರತ್ಯಾರೋಪಗಳು ನಿಲ್ಲಲಿ.ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ಬೆಳಗಾವಿಗೆ ಧಾವಿಸಿ ಯೋಧನನ್ನು ಬಂಧನದಿಂದ ಮುಕ್ತಗೊಳಿಸಿ,ಸಮಾಜದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಎರಡೂ ಪಡೆಗಳ ಗೌರವ ಕಾಪಾಡಲಿ ಎನ್ನುವದು ನಮ್ಮ ಒತ್ತಾಯ …