ಬೆಳಗಾವಿ-
ಬೆಳಗಾವಿಯಲ್ಲಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ ಲಿಂಗಾಯತ ಹೋರಾಟ ಮಾಡಿದ್ದಕ್ಕಾಗಿ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದವರನ್ನ ಸಚಿವ ಸಂಪುಟದಿಂದ ಹೊರಗಿಟ್ಟಿದ್ದಾರೆ ಅಂತ ಅನಿಸಿದೆ ಅದು ನನಗೆ, ಎಂ.ಬಿ.ಪಾಟೀಲ್ ಕೈಬಿಟ್ಟಿರುವುದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಹಾಗೇ ಅನಿಸುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ
ನಾವೇನು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡಿದ್ದು ತಪ್ಪಲ್ಲ.ನಾವು ಜಾತಿ ಮಾಡಿಲ್ಲ ಜನರಿಗೆ ಒಳ್ಳೆಯದಾಗಲಿ ಅಂತಾ ಹೋರಾಟ ಮಾಡಿದ್ದೇವೆ. ನಾವು ಮಾಡಿದ ಹೋರಾಟ ಅಪರಾಧ ಮಾಡಿದಂತಲ್ಲ. ದರೋಡೆ, ಕೊಲೆ ಮಾಡಿದಂಗೆ ಅಲ್ಲ ಅಂತಾ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ
ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಶಿಪಾರಸ್ಸು ತಿರಸ್ಕರಿಸಿದೆ ಅಂತಾ ಕೇಳಿದ್ದೇನೆ. ಮುಂದೆ ಮತ್ತೆ ನಾವು ಸಭೆ ಸೇರಿ ಏನ ಮಾಡ್ಬೇಕೆಂದು ತೀರ್ಮಾನ ತಗೊತಿವಿ.ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಬಿಡುವ ಪ್ರಶ್ನೆಯಿಲ್ಲ.ಹೋರಾಟ ನಿರಂತರವಾಗಿರುತ್ತದೆ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ
ನನಗೆ ಸಂಪುಟದಿಂದ ಕೈಬಿಟ್ಟ ಬಗ್ಗೆ ಕಾರಣ ಗೊತ್ತಿಲ್ಲ.ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದೆ.ಉತ್ತರ ಕರ್ನಾಟಕ ನಾಯಕರು ಆರಂಭ ಶೂರರು.ಯಾವುದೇ ರೀತಿಯ ಬದ್ಧತೆ ಹೊರಾಟ ಇಟ್ಟುಕೊಂಡಿಲ್ಲ.ಎಲ್ಲಿಯ ವರೆಗೂ ಉತ್ತರ ಕರ್ನಾಟಕ ಶಾಸಕರು ಒಂದಾಗಿ ಹೋರಾಡುವುದಿಲ್ಲ. ಅಲ್ಲಿಯ ವರೆಗೂ ಹೀಗೆ ಅನ್ಯಾಯ ಮುಂದೊರೆಯಲಿದೆ.ಎಂದು ಮಾಜಿ ಮಂತ್ರಿ ಬಸವರಾಜ ಹೊರಟ್ಟಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ
ಬಸವರಾಜ ಹೊರಟ್ಟಿ ಅವರು ಬೆಳಗಾವಿಯ ರೆಡ್ಡಿ ಸಮಾಜದ ಭವನಕ್ಕೆ ಭೇಟಿ ನೀಡಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದರು