ಬೆಳಗಾವಿ- ಭೀಕರ ಬರ ತಾಂಡವಾಡುತ್ತಿದ್ದರೂ ತಮ್ಮ ಮಕ್ಕಳ ಮದುವೆಯನ್ನ ಆಡಂಬರದಿಂದ ಮಾಡುವರರನ್ನ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತಂದೆ ತನ್ನ ಪುತ್ರಿಯ ವಿವಾಹದ ಮೂಲಕ ಪರಿಸರ ಜಾಗೃತಿ ಮೂಡಿಸಲು ಮುಂದಾಗಿದ್ದು, ಭೀಗರು, ಸ್ನೇಹಿತರು, ಹಿತೆಸಿಗಳನ್ನ ಮದುವೆಯ ಕರೆಯೋಲೆಯೊಂದಿಗೆ ಸಸಿ ಕೂಡುವ ಮೂಲಕ ಆಮಂತ್ರಿಸುತ್ತಿದ್ದಾರೆ.
ವಿಭಿನ್ನವಾಗಿ ವಿಶಿಷ್ಟವಾಗಿ ತಮ್ಮ ಮಗಳ ಮದುವೆ ಮಾಡಿಸುವವರ ಹೆಸರು ಬಸವರಾಜ ಖಾನಪ್ಪನವರ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನಿವಾಸಿ. ದಶಗಳಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಬಸವರಾಜ ಅವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕಳ ಪ್ರಭಾವಕ್ಕೆ ಒಳಗಾಗಿ, ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಈಗ ತಮ್ಮ ಪುತ್ರಿಯ ವಿವಾಹವನ್ನ ಪರಿಸರ ಜಾಗೃತಿಗೆ ಮುಡಿಪಾಗಿಟ್ಟಿದ್ದು, ವಿವಾಹದ ಕರೆಯೋಲೆಯೊಂದಿಗೆ ಸಸಿ ನೀಡವ ಮೂಲಕ ಸಮಾಜದ ಗಮನೆ ಸೆಳೆಯುತ್ತಿದ್ದಾರೆ.
ಇನ್ನು ಬಸವರಾಜ ಪುತ್ರಿ ಸುಜಾತ ಮದುವೆ ಇದೇ ತಿಂಗಳು 18 ರಂದು ನಡೆಯಲಿದೆ. ಸಂಜೀವ ಕೈ ಹಿಡಿಯಲಿರುವ ಪುತ್ರಿ ಸುಜಾತಳ ಮದುವೆ ಸಂಪೂರ್ಣ ಪರಿಸರ ಜಾಗೃತಿ ಮೂಡಿಸಲಿದೆ. ಬಸವರಾಜ ಮದುವೆ ಕಾರ್ಡ್ ಸಹ ವಿಶೇಷತೆಯಿಂದ ಕೂಡಿದೆ. ಸಾಲುಮರದ ತಿಮ್ಮಕ್ಕಳ ಭಾವಚಿತ್ರ, ಹಸಿರೇ ಉಸಿರು… ಹಸಿರು ಇಲ್ಲದ ಕಾಡು… ಉಸಿರು ಇಲ್ಲದ ಜೀವ ಹೀಗೆ ಪರಿಸರದ ಸಂರಕ್ಷಣೆ ಮಹತ್ವ ಸಾರುವ ಘೋಷ ವಾಕ್ಯಗಳನ್ನ ಮುದ್ರಿಸಿದ್ದಾರೆ. ಸಂಪೂರ್ಣ ಹಸಿರು ಬಣ್ಣದಿಂದ ಕೂಡಿರುವ ಮದುವೆ ಕಾಡು ಮತ್ತು ಮದುವೆಗೆ ಆಮಂತ್ರಿಸಿದ ಸಾವಿರ ಜನರಿಗೂ ಸಸಿ ಇರುವ ಪಾಟ್, ಸಸಿಗಳನ್ನ ನೀಡಿ ಆಹ್ವಾನಿಸುತ್ತಿದ್ದಾರೆ.
ಒಟ್ಟ್ನಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ ಮಕ್ಕಳ ವಿವಾಹವನ್ನ ಆಡಂಬರದಿಂದ ಮಾಡುವುದಲ್ಲ. ಮದುವೆಯನ್ನ ಸಮಾಜಮುಖಿಯಾಗಿ ಮಾಡುವ ಮೂಲಕ ಪರಿಸರದ ಸಂದೇಶ ನೀಡುತ್ತಿರುವ ಬಸವರಾಜ ಕಾರ್ಯ ಜನಮೆಚ್ಚುಗೆ ಪಾತ್ರವಾಗಿದೆ.