ಬೆಳಗಾವಿ- ವಿಶ್ವೇಶರಯ್ತ ತಾಂತ್ರಿಕ ವಿಶ್ವವಿದ್ಯಾಲಯದ ಕುರಿತು ಆಘಾತಕಾರಿ ಬೆಳವಣಿಗಳನ್ನು ಗಮನಿಸಿ ಈ ಕುರಿತು ಬೆಳಗಾವಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಜಾಗೃತಿ ಮಾಡುವ ಉದ್ದೇಶದಿಂದ ಬೆಳಗಾವಿಗೆ ಬಂದಿದ್ದೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿತಾಯು ವಿಭಜನೆಗೆ ತೀವ್ರ ವಿರೋಧ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ರಾಜ್ಯ ಸರ್ಕಾರ ವಿಭಜನೆ ಮಾಡಿ ಹಾಸನದಲ್ಲಿ ಇನ್ನೊಂದು ವಿಶ್ವ ವಿದ್ಯಾಲಯದ ಸ್ಥಾಪಿಸಲು ಹೊರಟಿರುವದು ಅಪಾಯಕಾರಿ ಮತ್ತು ಇದೊಂದು ಕಪ್ಪು ಚುಕ್ಕೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯೆಕ್ತಡಿಸಿದ್ದಾರೆ
ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವಿಭಜನೆಯಾದರೆ ಬೆಳಗಾವಿಯ ವಿತಾಯು ಮುಚ್ಚಬೇಕಾಗುತ್ತದೆ ಅದಕ್ಕೆ ಕೀಲಿ ಹಾಕುವ ಪರಿಸ್ಥಿತಿ ಎದುರಾಗುತ್ತದೆ ಎಂದು ರಾಯರೆಡ್ಡಿ ಕಳವಳ ವ್ಯೆಕ್ತಪಡಿಸಿದ್ದಾರೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ನಿರ್ಧಾರವನ್ನು ಬಜೆಟ್ ಪ್ಯಾರಾದಿಂದ ಕಿತ್ತು ಹಾಕಬೇಕು ದಕ್ಷಿಣ ಕರ್ನಾಟಕದ ಶಾಸಕರು ಈ ವಿಷಯದ ಕುರಿತು ಔದಾರ್ಯ ತೋರಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಕೈ ಮುಗಿದು ವಿನಮ್ರತೆಯಿಂದ ಕೋರುತ್ತೇನೆ ಎಂದು ಬಸವರಾಜ ರಾಯರೆಡ್ಡಿ ಮನವಿ ಮಾಡಿಕೊಂಡರು
ಆದಾಯ ತೆರಿಗೆ ವಿಚಾರದಲ್ಲಿ ವಿತಾಯು ಕೇಸ್ ಗೆದ್ದಿದೆ 470 ಕೋಟಿ ರೂ ಆದಾಯ ಬರುತ್ತದೆ ವಿಶ್ವವಿದ್ಯಾಲಯ ವಿಭಜನೆಯಾದರೆ ಇದೆಲ್ಲ ಹಣ ಹಾಸನಗೆ ಹೋಗುತ್ತದೆ ವಿಟಿಯು ಮುಚ್ಚಬೇಕಾಗುತ್ತದೆ ಎನ್ನುವ ಆತಂಕ ಬಸವರಾಜ ರಾಯರೆಡ್ಡಿ ಅವರದ್ದಾಗಿದೆ
ವಿಶ್ವ ವಿದ್ಯಾಲಯದ ಕುರಿತು ರಚಿಸಿದ ಸಮೀತಿ ಕೂಡಾ ವಿಭಜನೆಗೆ ವಿರೋಧ ವ್ಯೆಕ್ತಪಡಿಸಿದೆ ಎಂದು ತಿಳಿದುಬಂದಿದೆ .ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವದು ಸರಿಯಲ್ಲ ಎಂದು ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು
ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ರೇವಣ್ಣ ಮತ್ತು ಕುಮಾರಸ್ವಾಮಿ ಅವರು ವಿಟಿಯು ನಲ್ಲಿ ಉಳಿದುಕೊಂಡಿದ್ದರು ಬಹುಶ ಅವರ ಮನಸ್ಸಿಗೆ ವಿಟಿಯು ಬಂದಿದೆ ಸುಂದರ ಹುಡಗಿ ನೋಡಿದಾಗ ಕಣ್ಣು ಹಾಕುವದು ಗೌಡ್ರ ಚಾಳಿ ಅನ್ನೋದು ಗಾದೆ ಇದೆ.ನಮ್ಮ ಹುಡಗಿಯ ಮೇಲೆ ಕಣ್ಣು ಹಾಕುವದು ಸರಿಯಲ್ಲ ಎಂದು ಬಸವರಾಜ ರಾಯರೆಡ್ಡಿ ವ್ಯೆಂಗ್ಯವಾಡಿದರು