ಬೆಳಗಾವಿ – ಬೆಳಗಾವಿ ಜಿಲ್ಲಾಡಳಿತ ಇತ್ತೀಚಿಗೆ ನಗರದ ಪ್ರವಾಸಿ ಮಂದಿರದಲ್ಲಿ ಮುಸ್ಲೀಂ ಮುಖಂಡರು ,ಜಮಾತಿನ ಪದಾಧಿಕಾರಿಗಳು ಹಾಗೂ ಪ್ರಮುಖ ಮೌಲ್ವಿಗಳ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿ ರಮಾಜಾನ್ ಅವಧಿಯಲ್ಲಿ ಪಾಲಿಸಬೇಕಾದ ವಿಷಯಗಳು ಕುರಿತು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ರಮಜಾನ್ ತಿಂಗಳಲ್ಲಿ ಯಾರೊಬ್ಬರು ಮಸೀದಿಯಲ್ಲಿ ನಮಾಜ್ ಮಾಡುವಂತಿಲ್ಲ,ಆಝಾನ್ ಕೊಡುವಂತಿಲ್ಲ,ಆದ್ರೆ ಪವಿತ್ರ ರಮಜಾನ್ ತಿಂಗಳಲ್ಲಿ ಮುಸ್ಲೀಂ ಬಾಂಧವರು ಉಪವಾಸದ ಆಚರಣೆ ಮಾಡುತ್ತಾರೆ ,ಬೆಳಗಿನ ಜಾವ ಸೆಹರಿ ಅಂದ್ರೆ ಉಪವಾಸ ಆರಂಭ ಮಾಡುತ್ತಾರೆ ಉಪವಾಸದ ಸೆಹರಿ ಸಮಯ ಮುಕ್ತಾಯ ಎಂದು ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡುವದು ಸಂಜೆ ರೋಜಾ ಅಂದ್ರೆ ಉಪವಾಸದ ಸಮಯ ಮುಗಿದ ಬಳಿಕ ರೋಜಾ ಖೋಲೋ….ಅಂದ್ರೆ ಉಪವಾಸದ ಸಮಯ ಮುಕ್ತಾಯ ಎಂದು ಅನೌನ್ಸ್ ಮಾಡುವದಕ್ಕೆ ಮಾತ್ರ ಜಿಲ್ಲಾಡಳಿತ ಮೌಲ್ವಿಗಳ ಸಭೆಯಲ್ಲಿ ಸಮ್ಮತಿ ಸೂಚಿಸಿದೆ .
ಆಝಾನ್ ಮಾಡಲು ಅನುಮತಿ ಸಿಕ್ಕಿದೆ ಎಂದು ಕೆಲವರು ಜಿಲ್ಲಾಡಳಿತದ ನಿರ್ಧಾರವನ್ನು ತಪ್ಪಾಗಿ ಅರ್ಥೈಸಿ ಇಂದು ಬೆಳಿಗ್ಗೆ ಆಝಾನ್ ಮಾಡಿದ್ದು ಬೆಳಗಾವಿ ಪೋಲೀಸರು ಆಝಾನ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ .
ಮಸೀಧಿಗಳಲ್ಲಿ ಆಝಾನ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ.ಮಸೀದಿಯಲ್ಲಿ ಯಾರಿಬ್ಬರೂ ನಮಾಜ್ ಮಾಡಲು ಅನುಮತಿ ನೀಡಿಲ್ಲ ಈ ಕುರಿತು ಬೆಳಗಾವಿ ನಗರದಲ್ಲಿ ಇಲ್ಲ ಸಲ್ಲದ ವದಂತಿಗಳು ಹರಡುತ್ತಿವೆ.ಮಸೀದಿಯಲ್ಲಿ ಐದು ಜನ ನಮಾಜ್ ಮಾಡಬಹುದು,ಆಝಾನ್ ಕೊಡಬಹುದು ಎಂಬ ವದಂತಿಗಳು ಹರಡುತ್ತಿವೆ.
ಜಿಲ್ಕಾಡಳಿತ ರಮಜಾನ್ ಆಚರಣೆಯ ಕುರಿತು ಮುಸ್ಲೀಂ ಸಮಾಜ ಅನುಸರಿಸಬೇಕಾದ ವಿಷಯಗಳ ಕುರಿತು ಸ್ಪಷ್ಟವಾದ ಲಿಖಿತ ಆದೇಶ ಹೊರಡಿಸುವದು ಅಗತ್ಯವಾಗಿದೆ .