ಬೆಳಗಾವಿ-ಗಡಿನಾಡು ಗುಡಿ ಕುಂದಾನಗರಿ ಇಂದು ಸಂಪೂರ್ಣವಾಗಿ ಸ್ತಬ್ಧ ವಾಗಿದೆ,ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಪೋಲೀಸರ ಖಡಕ್ ಪಹರೆ ಇದ್ದು ಸಿಟಿಯಲ್ಲಿ ಇನ್ನ್ ಕಮೀಂಗ್ ಔಟ್ ಗೋಯಿಂಗ್ ಎರಡೂ ಬಂದ್ ಆಗಿದೆ.
ಕೊರೋನಾ ಸೊಂಕು ಹರಡುವದನ್ನು ತಡೆಯಲು ಪ್ರತಿ ಭಾನುವಾರ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿದೆ
ನಗರ ಪ್ರವೇಶ ಮಾಡುವ ನಾಲ್ಕೂ ದಿಕ್ಕುಗಳಲ್ಲಿ ಎಲ್ಲ ಪ್ರವೇಶ ಮಾರ್ಗಗಳಲ್ಲಿ ಪೋಲೀಸರ ಬಿಗಿ ಬಂದೋಬಸ್ತಿ ಇದ್ದು ಪೋಲೀಸರು ಇಂದು ಬೆಳಗಿನ ಜಾವದಿಂದಲೇ ಯಾರೊಬ್ಬರೂ ನಗರ ಪ್ರವೇಶ ಮಾಡದಂತೆ ತಡೆಯುತ್ತಿದ್ದು,ಬೈಕ್ ಸವಾರರನ್ನು ಮರಳಿ ಕಳಿಸುವ ದೃಶ್ಯಗಳು ಸಾಮಾನ್ಯವಾಗಿವೆ.
ಬೆಳಗಾವಿ ಬಸ್ ನಿಲ್ದಾಣ ಬಿಕೋ ಎಂದರೆ ನಗರ ವ್ಯಾಪಾರಿಗಳು ಕೊರೋನಾ ಕಾಟ ಸಾಕಪ್ಪೋ ಸಾಕು,ಎನ್ನುಂತಾಗಿದೆ,ಯಾಕಂದ್ರೆ ಬೆಳಗಾವಿಯ ಎಲ್ಲ ಮಾರುಕಟ್ಟೆಗಳು ಬಂದ್ ಆಗಿವೆ,ಅಟೋಗಳು ಚಾಲಕರ ಮನೆಗಳ ಎದುರು ಪಾರ್ಕ ಆಗಿವೆ.ಬಸ್ ಗಳು ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾಲಾಗಿ ನಿಂತಿವೆ.
ಒಟ್ಟಾರೆ ಬೆಳಗಾವಿ ನಗರದಲ್ಲಿ ಸರ್ಕಾರ ಘೋಷಣೆ ಮಾಡಿದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ