ಬೆಳಗಾವಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ 15 ರಂದು ಬೆಳಗಾವಿಗೆ ಬರುತ್ತಿದ್ದು ಇವರ ಭೇಟಿ ಕೆಲವು ನಾಯಕರಿಗೆ ನಡುಕ ಹುಟ್ಟಿಸಿದರೆ ಕುಟುಂಬ ರಾಜಕಾರಣದಿಂದ ಬೇಸತ್ತು ಹೋಗಿರುವ ಕಾರ್ಯಕರ್ತರಿಗೆ ಖುಷಿ ತಂದಿದೆ
ಬೆಳಗಾವಿ ಜಿಲ್ಲಾ ಕಾಂಗ್ರೆಸನಲ್ಲಿ ಎಲ್ಲವೂ ಸರಿಯಿಲ್ಲ…. ಪಕ್ಷ ಸಂಘಟನೆ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮನೆಮನೆಗೆ ಕಾಂಗ್ರೇಸ್ ನಡಿಗೆಗೆ ಚಾಲನೆ ನೀಡುತ್ತಿದ್ದರೆ. ಇತ್ತ ಬೆಳಗಾವಿ ಕಾಂಗ್ರೇಸ್ ಅಲ್ಲಿ ಟೀಕಿಟಗಾಗಿ ಬಿನ್ನಮತ ತೆಲೆದೋರಿದೆ. ಮೂಲ ಕಾಂಗ್ರೆಸ್ಸಿಗರೂ ವೇಣಗೋಪಾಲರನ್ನ ಭೇಟಿ ಮಾಡಿ ಚಮಚಾಗಳು.. ಏಜಂಟರಿಗೆ ಮಣೆ ಹಾಕದಂತೆ ಒತ್ತಾಯಿಸಲಿದ್ದು ನೇರವಾಗಿ ಇಂದು ತಮ್ಮ ಆಕ್ರೋಶವನ್ನು ಮಾದ್ಯಮಗಳ ಮುಂದೆ ಹೋರಹಾಕಿದ್ದಾರೆ.
2018ರ ಚುನಾವಣೆಗೆ ಕಾಂಗ್ರೆಸ್ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ದೃಷ್ಟಿಕೊನವಿಟ್ಟಿಕೊಂಡು ಮನೆ ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪರಿಶೀಲನೆಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ನಾಳೆ ಅ.15ರಂದು ಬೆಳಗಾವಿ ಆಮಿಸಲಿದ್ದಾರೆ. ವೇಣುಗೋಪಾಲ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಗರಿಗೆದರಿದೆ. ಮೂಲ ಕಾಂಗ್ರೆಸ್ ನಾಯಕರು ವೇಣುಗೋಪಾಲರ್ ಮುಂದೆ ಅಳಲು ತೊಡಿಕೊಳ್ಳುವ ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನ ನಿರ್ಲಕ್ಷಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಚಮಚಾಗಳಿಗೆ, ಏಜೆಂಟರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದು ನಾಳೆ ವೇಣುಗೋಪಾಲ ಅವರ ಮುಂದೆ ತಮ್ಮ ಅಳಲು ತೋಡಿಕೊಳ್ಳಲಿದ್ದಾರೆ.
ಇನ್ನು ಬೆಳಗಾವಿ ನಾಳೆ ವೇಣುಗೋಪಾಲ್ ನಾಲ್ಕು ಮತಕ್ಷೇತ್ರಗಳಲ್ಲಿ ಸಂಚರಿಸಿಲಿದ್ದಾರೆ. ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ ಹಾಗೂ ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಪರೀಶಿಲನೆ ನಡೆಸಲಿದ್ದು, ಜತೆಗೆ ಆಯಾ ಮತಕ್ಷೇತ್ರದ ಹಾಲಿ, ಮಾಜಿ ಶಾಸಕರು ಹಾಗೂ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ವೇಣುಗೋಪಾಲ್ ಭೇಟಿ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಮಧ್ಯೆ ನಡೆದಿರುವ ಮುಸುಕಿನ ಗುದ್ದಾಡಕ್ಕೆ ತೇಪೆ ಬೀಳಲಿದೆಯಾ ಎಂಬ ಪ್ರಶ್ನೆ ಕೈ ಕಾರ್ಯಕರ್ತರದ್ದು.
ಒಟ್ಟ್ನಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಗಡಿ ಜಿಲ್ಲೆ ಬೆಳಗಾವಿ ಭೇಟಿ ಕೈ ಪಾಳ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು. ಕೈ ಪಾಳ್ಯದಲ್ಲಿದ್ದ ಸತೀಶ್ ಜಾರಕಿಹೋಳಿ ಮತ್ತು ರಮೇಶ್ ಜಾರಕಿಹೋಳಿ ಲಕ್ಷ್ಮೀ ಹೇಬ್ಬಾಳ್ಕರ್ ಕೈ ಮೇಲಾಗತ್ತಾ ಭಿನಮತ ಶಮನಗೊಳ್ಳುತ್ತಾ ಅಥವಾ ಮತಷ್ಟು ಬಿನ್ನಮತ ಭುಗಿಲೆಳುತ್ತಾ ಎಂಬುದು ಕಾದುನೋಡಬೇಕಿದೆ.