ಬೆಳಗಾವಿ-ಕೊರೊನಾ ನಿಯಂತ್ರಿಸಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ಅಗತ್ಯ ವಸ್ತುಗಳ ಪೂರೈಕೆ ಎಲ್ಲೆಡೆ ತಲೆನೋವಾಗಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರ ನಿರಂತರ ಶ್ರಮದಿಂದ ನಗರದಲ್ಲಿ ಮತ್ತು ಜಿಲ್ಲೆಯ ಹಳ್ಳಿ ಹಳ್ಳಿಗೂ ಅಗತ್ಯ ವಸ್ತುಗಳ ಪೂರೈಕೆ ಗದ್ದಲ ಗಲಾಟೆ ಇಲ್ಲದೇ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ.
ತಾಲೂಕು ಕೇಂದ್ರಗಳಲ್ಲಿ ದಿನಸಿ ಪೂರೈಸುವ ಹೋಲ್ಸೆಲ್ ಅಂಗಡಿಗಳು ಲಾಕ್‌ಡೌನ್ ಆಗಿವೆ. ಹೀಗಾಗಿ ತಾಲೂಕು, ಹಳ್ಳಿಗಳ ಕಿರಾಣಿ ಅಂಗಡಿಗಳ ಮಾಲೀಕರು ಜಿಲ್ಲಾ ಕೇಂದ್ರದತ್ತ ಮುಖ ಮಾಡುತ್ತಿದ್ದಾರೆ.
ನಗರದ ರವಿವಾರ ಪೇಟೆಗೆ ತಾಲೂಕು ಕೇಂದ್ರಗಳ ಕಿರಾಣಿ ಅಂಗಡಿಗಳ ವ್ಯಾಪಾರಸ್ಥರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ನಿತ್ಯ ಬೆಳಗಿನ ಸಮಯದಲ್ಲಿ ನೂರಾರು ವಾಹನಗಳು ಇಲ್ಲಿಗೆ ಬರುತ್ತಿವೆ. ಜನದಟ್ಟಣೆ ನಿಯಂತ್ರಿಸಲು ಮಾರ್ಕೆಟ್ ಪೊಲೀಸ್ ಠಾಣೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ರವಿವಾರ ಪೇಟೆಯ ಹೋಲ್ಸೆಲ್ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ ಊರುಗಳತ್ತ ತೆರಳುತ್ತಿದ್ದಾರೆ.
ಮಾರ್ಕೆಟ್ ಠಾಣೆ ಸಿಪಿಐ ಸಂಗಮೇಶ ಶಿವಯೋಗಿ ಮೈಕ್ ಅಲ್ಲಿ ಅನೌನ್ಸ್ ಮಾಡುತ್ತ ಜನದಟ್ಟಣೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸುತ್ತಿದ್ದಾರೆ. ಅವರ ಈ ಕಾರ್ಯ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
ಎಲ್ಲ ಕಿರಾಣಿ ಅಂಗಡಿಗಳ ಮಾಲೀಕರಿಗೆ ಹೋಲ್ಸೆಲ್ ದರದಲ್ಲಿ ದಿನಸಿ ಸಿಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ದರ ಏರಿಕೆಯ ಬಿಸಿಯೂ ನಿಯಂತ್ರಣಕ್ಕೆ ಬಂದಿದೆ. ಅಗತ್ಯ ವಸ್ತುಗಳ ಪೂರೈಕೆ ಪರ್ಫೆಕ್ಟ್ ಆಗಿರುವ ಕಾರಣ ಮಾರ್ಕೆಟ್ ಠಾಣೆ ಪೊಲೀಸರು ಹಾಗೂ ಠಾಣೆಯ ಕ್ಯಾಪ್ಟನ್ ಸಂಗಮೇಶ ಶಿವಯೋಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಿರಾಣಿ ವಸ್ತುಗಳನ್ನು ಖರೀದಿಸಲು ಜಿಲ್ಲೆಯ ಹಳ್ಳಿಗಳಿಂದ ಬೆಳಗಾವಿಗೆ ಬರುತ್ತಿದ್ದಾರೆ,ಹಳ್ಳಿಗಳಿಗೆ ಕಿರಾಣಿ ವಸ್ತುಗಳನ್ನು ಸಾಗಿಸಲು ಬೆಳಗಿನ ಜಾವ ನೂರಾರು ವಾಹನಗಳು ಬೆಳಗಾವಿಯ ರವಿವಾರ ಪೇಠೆಗೆ ಬರುತ್ತಿವೆ,ಬೆಳಿಗ್ಗೆ ಐದು ಘಂಟೆಯಿಂದಲೇ ಮಾರ್ಕೆಟ್ ಠಾಣೆಯ ಪೋಲೀಸರು ವಾಹನಗಳನ್ನು ಸರದಿಯಲ್ಲಿ ನಿಲ್ಲಿಸುತ್ತಾರೆ ರವಿವಾರ ಪೇಠೆಯಲ್ಲಿ ಜನಜಂಗುಳಿ ಹೆಚ್ಚಾಗದಂತೆ ನೋಡಿಕೊಳ್ಳುತ್ತಾರೆ,ಹಳ್ಳಿಗಳಿಂದ ಬಂದ ವ್ಯಾಪಾರಿಗಳು ಅವಸರ ಮಾಡದೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ,ತಮ್ಮ ಊರುಗಳಿಗೆ ತೆರಳುತ್ತಾರೆ.
ಬೆಳಗಾವಿ ನಗರದ ವಿವಿಧ ಠಾಣೆಗಳ ಪೋಲೀಸರು ತಮ್ಮ ವ್ಯಾಪ್ತಿಯಲ್ಲಿ ಬರುವ ಮಾರುಕಟ್ಟೆಗಳನ್ನು ವ್ಯೆವಸ್ಥಿತವಾಗಿ ನಿಯಂತ್ರಣ ಮಾಡುತ್ತಿರುವದರಿಂದ ಬೆಳಗಾವಿಯ ಎಲ್ಲ ಮಾರುಕಟ್ಟೆಗಳು ಗದ್ದಲ ಗಲಾಟೆ ಇಲ್ಲದೇ ವ್ಯೆವಹಾರ ನಡೆಸುತ್ತಿವೆ.