ಬೆಳಗಾವಿ ಬಸ್ ಸ್ಟ್ಯಾಂಡ್ ದಲ್ಲಿ ಪಂಗನಾಮ….!!!
ಬೆಳಗಾವಿ – ಹಿರೇಬಾಗೇವಾಡಿಯಿಂದ ಬೆಳಗಾವಿ ಬಸ್ ಸ್ಟ್ಯಾಂಡ್ ನಲ್ಲಿ ಬಂದಿಳಿದಿದ್ದ ಬಸನಗೌಡ್ರ ಗೆ ಏನ್ರೀ ಗೌಡ್ರ ನಿವ್ಯಾಕ ಬಂದ್ರೀ ನಿಮ್ಮ ಮಗ ಯಾಕ ಬರಲಿಲ್ಲ ಅಂತ ಪರಿಚಯಸ್ಥರಂತೆ ಮಾತಾಡಿ ಬರೊಬ್ಬರಿ ಆರು ತೊಲೆ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ
ಸುಮಾರು ಎರಡುವರೆ ಘಂಟೆಗೆ ಹಿರೇಬಾಗೇವಾಡಿಯ ಬಸನಗೌಡ ಹಾದಿಮನಿ ಅವರನ್ನು ಪರಿಚಯಸ್ಥರಂತೆ ಮಾತನಾಡಿಸಿ ಬೆಳಗಾವಿಗೆ ಯ್ಯಾಕ ಬಂದ್ರೀ ನಿಮ್ಮ ಮಗಾ ಬರಲಿಲ್ವಾ ಎಂದಾಗ ನನ್ನ ಮಗನ ಗೆಳೆಯರು ಇರಬಹುದು ಅಂತಾ ಗೌಡ್ರು ಬಂಗಾರ ಅಂಗಡಿಗೆ ಬಂದಿದ್ದೆ ಎಂದು ಹೇಳಿದ್ದಾರೆ ಆಗ ಖದೀಮರು ನಾವೂ ಬಂಗಾರ ಅಂಗಡಿ ಮಾಲೀಕನನ್ನು ಬಿಡಲು ಬಸ್ ಸ್ಟ್ಯಾಂಡಿಗೆ ಬಂದಿದ್ವಿ ನಿಮ್ಮ ಬಂಗಾರಕ್ಕೆ ಒಳ್ಳೇ ಬೆಲೆ ಕೊಡಿಸ್ತೀವಿ ಅಂತ ಹೇಳಿ ಹಿರೇಬಾಗೇವಾಡಿ ಗೌಡ್ರ ಆರು ತೊಲೆ ಬಂಗಾರದ ಆಭರಣ ದೋಚಿ ಪರಾರಿಯಾಗಿದ್ದಾರೆ.
ಖದೀಮರ ಮಾತಿಗೆ ಮರುಳಾಗಿ ಬಂಗಾರ ಕಳೆದುಕೊಂಡ ಗೌಡ್ರು ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.
ಪೋಲೀಸರು ಸಿಸಿ ಡಿವ್ಹಿ ಪೋಟ್ಹೇಜ್ ಚೆಕ್ ಮಾಡಿಸಿ ಕಳ್ಳರ ಪತ್ತೆಗೆ ಪ್ರಯತ್ನ ಮುಂದುವರೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ