ಬೆಳಗಾವಿ- ಐದು ಕೋಟಿ ರೂ ಹಣ ಲಪಟಾಯಿಸಲು ತನ್ನ ಲವರ್ ಜೊತೆ ಸೇರಿಕೊಂಡು ಯುವತಿಯೊಬ್ಬಳು ತನ್ನ ಆಪ್ತ ಗೆಳತಿಯನ್ನೇ ಅಪಹರಿಸಿದ ಘಟನೆ ಬೆಳಗಾವಿಯ ಟಿಳಕವಾಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ಅಪಹರಣ ಪ್ರಕರಣ ದಾಖಲುಸಿಕೊಂಡು ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೋಲೀಸರು ಸಿನಿಮಯ ಮಾದರಿಯಲ್ಲಿ ಅಪಹರಣಕ್ಕೊಳಗಾದ ಯುವತಿಯನ್ನು ರಕ್ಷಿಸಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ
ದಿವ್ಯಾ ಎಂಬ ಇಂಜನೀಯರಿಂಗ್ ವಿಧ್ಯಾರ್ಥಿನಿ ತನ್ನ ಲವರ್ ಕೇದಾರ ಜೊತೆ ಸೇರಿಕೊಂಡು ಈ ಕೃತ್ಯ ನಡೆಸಿದ್ದು ಆರೋಪಿತರಾದ ಕುಮಾರಿ,ದಿವ್ಯಾ ಮಲ್ಲಿಕಾರ್ಜುನ ಮಲಘಾನ್ ಇಂಡಿಕಾ ಕಾರಿನ ಚಾಲಕ ಬಬ್ಲು ಅಲಿಯಾಸ್ ಸುಮೀತ ಗಂಗಪ್ಪ ನಭಾಪೂರ ಮತ್ತು ಕೇದಾರಿ ಹಣಮಂತರಾವ ಪಾಟೀಲ ಎಂಬಾತರನ್ನ ಬಂಧಿಸಿರುವ ಪೋಲೀಸರು ಅಪಹರಕ್ಕೊಳಗಾದ ಜಿಐಟಿ ಕಾಲೇಜಿನ ವಿದ್ಯಾರ್ಥಿ ಕುಮಾರಿ ಅರ್ಪಿತಾಳನ್ನು ರಕ್ಷಿಸಿದ್ದಾರೆ
ಆರೋಪಿ ದಿವ್ಯಾ ತನ್ನ ಲವರ್ ಕೇದಾರ ಜೊತೆ ಸೇರಿಕೊಂಡು ಅರ್ಪಿತಾಳನ್ನು ಡಿನ್ನರ್ ಗೆ ಕರೆದುಕೊಂಡು ಹೋಗಿದ್ದಾರೆ ಬೆಳಗಾವಿಯ ನಿಯಾಝ ಹೊಟೆಲ್ ನಲ್ಲಿ ಡಿನ್ನರ್ ಮಾಡಿಸಿ ನಂತರ ಎಳನೀರಿನಲ್ಲಿ ನಿದ್ದೆ ಗುಳಗಿ ಹಾಕಿ ಅರ್ಪಿತಾಳ ಬಾಯಿಗೆ ಕ್ಲೋರೋಫಾರಂ ಒತ್ತಿ ಅರ್ಪಿತಾಳನ್ನು ಇಂಡಿಕಾರಿನಲ್ಲಿ ಹಾಕಿ ಕಿರಾತಕರು ಅಪಹರಿಸುದ್ದರು
ಕಿರಾರಕಿ ದಿವ್ಯಾ ತನ್ನ ಲವರ್ ಕೇದಾರ ಜೊತೆ ಸೇರಿಕೊಂಡು ಅರ್ಪಿತಾಳನ್ನು ಗದಗಿನಲ್ಲಿರುವ ಕೇದಾರನ ಮನೆಯಲ್ಲಿ ಕಟ್ಟಿಹಾಕಿದ್ದರು ನಂತರ ಅರ್ಪಿತಾಳ ತಂದೆಗೆ ಐದು ಕೋಟಿ ಹಣ ತರುವಂತೆ ಧಮಕಿ ಹಾಕಿದ್ದರು
ಅರ್ಪಿತಾಳ ತಂದೆ ಧಾರವಾಡದಲ್ಲಿ ವಾಸವಾಗಿದ್ದು ಅರ್ಪಿತಾಳ ಅಪಹರಣದ ಕುರಿತು ಮಂಗಳವಾರ ಟಿಳಕವಾಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದರು
ಖಡೇಬಝಾರ್ ಎಸಿಪಿ ಜಯಕುಮಾರ ನೇತ್ರತವದ ಟಿಳಕವಾಡಿ ಪೋಲೀಸರ ತಂಡ ಆರೋಪಿಗಳನ್ನು ಬೆನ್ನಟ್ಟಿ ಗದಗನಲ್ಲಿ ಅಪಹರಣಕಾರರನ್ನು ಬಂಧಿಸಿ ಅರ್ಪಿತಾಳನ್ನು ಸುರಕ್ಷಿತವಾಗಿ ಗದಗನಿಂದ ಬೆಳಗಾವಿಗೆ ಕರೆತಂದಿದ್ದಾರೆ
ತಿರುಪತಿ ತಿಮ್ಮಪ್ಪನಿಗೆ ಎಪ್ಪತ್ತು ಲಕ್ಷ
ಅಪಹರಣಕಾರರು ಅರ್ಪಿತಾಳನ್ನು ಅಪಹರಿಸುವ ಮೊದಲು ಮೂರು ಬಾರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಕಿಡ್ನ್ಯಾಪ್ ಪ್ರಕರಣ ಸಕ್ಸೆಸ್ ಆಗಿ ಐದು ಕೋಟಿ ಕೈ ಸೇರಿದರೆ 70 ಲಕ್ಷ ರೂಗಳನ್ನು ತಿಮ್ಮಪ್ಪನಿಗೆ ಅರ್ಪಿಸುವದಾಗಿ ಈ ಕಿರಾತಕರು ಹರಕೆ ಹೊತ್ತಿದ್ದರು ಜೊತೆಗೆ ಯಾವುದೇ ರೀತಿಯ ಅಡತಡೆಗಳು ಬಾರದಂತೆ ಮಾಟ ಮಂತ್ರ ಮಾಡುವ ಭವಿಷ್ಯ ಹೇಳುವವರ ಹತ್ತಿರ ಇವರು ಬಂದೋಬಸ್ತ ಮಾಡಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಡಿಸಿಪಿ ರಾಧಿಕಾ ಮತ್ತು ಅಮರನಾಥ ರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು
ದಿವ್ಯಾ ಮತ್ತು ಅರ್ಪಿತಾ ಆಪ್ತ ಗೆಳತಿಯರು
ಕಿರಾತಕಿ ದಿವ್ಯಾ ಮತ್ತು ಅಪಹರಣಕ್ಕೊಳಗಾಗಿದ್ದ ಅರ್ಪಿತಾ ಇಬ್ಬರು ಆಪ್ತ ಗೆಳತಿಯರು ಅರ್ಪಿತಾ ಜಿಐಟಿ ಕಾಲೇಜಿನ ಇಂಜನೀಯರಗ್ ಸ್ಟುಡೆಂಟ ಜೊತೆಗೆ ದಿವ್ಯಾ ಕೂಡ ಇಂಜನೀಯರಿಂಗ್ ಸ್ಟುಡೆಂಟ್ ಆಗಿದ್ದಾಳೆ ದಿವ್ಯಾಳ ಲವರ್ ಕೇದಾರ ಮಾಟ ಮಂತ್ರ ಮಾಡುವ ದಂಧೆ ಮಾಡುತ್ತಾನೆ ಎಂದು ತಿಳಿದು ಬಂದಿದೆ