ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮನೆಯಲ್ಲಿ ನಡೆಸುತ್ತಿರುವ ಮಗ್ಗಗಳನ್ನು ಕಮರ್ಷಿಯಲ್ ಎಂದು ಪರಗಣಿಸಿ ದುಪ್ಪಟ್ಟು ತೆರಿಗೆ ಹಾಗು ದಂಡ ವಸೂಲಿ ಮಾಡುತ್ತಿದ್ದು ನೇಕಾರರ ಉದ್ಯಮ ಸಂಕಷ್ಟದಲ್ಲಿದ್ದು ನೇಕಾರರನ್ನು ಕಮರ್ಷಿಯಲ್ ಎಂದು ಪರಗಣಿಸಬೇಡಿ ರೆಸಿಡೆನ್ಸಿಯಲ್ ಎಂದು ಪರಿಗಣಿಸುವಂತೆ ಬಡ ನೇಕಾರ ಬಂಧುಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು
ಮಾಜಿ ಶಾಸಕ ಅಭಯ ಪಾಟೀಲ ಅವರು ಈ ಹಿಂದೆ ನೇಕಾರರ ದಂಡ ವಸೂಲಿ ತಡೆಯುವಂತೆ ಪ್ರತಿಭಟನೆ ನಡೆಸಿ ನೇಕಾರರ ಪರವಾಗಿ ಕಳ ಕಳಿ ವ್ಯೆಕ್ತಪಡಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು ಸಭೆಯಲ್ಲಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ಅಭಯ ಪಾಟೀಲ ಸೇರಿದಂತೆ ನೇಕಾರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು
ಸಭೆಯಲ್ಲಿ ಮಾತನಾಡಿದ ನೇಕಾರರು ಒಂದು ಕಾಲದಲ್ಲಿ ಬೆಳಗಾವಿಯ ನೇಕಾರ ಉದ್ಯಮ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು ಇಲ್ಲಿಯ ಪಾಲಿಸ್ಟರ್ಸೀಸೀರೆಗಳಿಗ ಭಾರೀ ಬೇಡಿಕೆ ಇತ್ತು ಇತ್ತಿಚಿನ ದಿನಗಳಲ್ಲಿ ಉದ್ಯಮ ಸಂಕಷ್ಟದಲ್ಲಿದ್ದು ನೇಕಾರರು ಬದುಕುವದು ಕಷ್ಟವಾಗಿದ್ದು ದಯಮಾಡಿ ಕಮರ್ಷಿಯಲ್ ದೃಷ್ಠಿಯಿಂದ ನಮ್ಮನ್ನು ನೋಡಬೇಡಿ ನಮ್ಮಿಂದ ದಂಡ ವಸೂಲಿ ಮಾಡಬೇಡಿ ಎಂದು ಸಭೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು
ನೇಕಾರರ ಸಮಸ್ಯೆ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಬೆಳಗಾವಿಯಲ್ಲಿ ಎಷ್ಟು ಜನ ನೇಕಾರರಿದ್ದಾರೆ ಯಾರು ಎಷ್ಟು ಮಗ್ಗಗಳನ್ನು ನಡೆಸುತ್ತಿದ್ದಾರೆ ಅನ್ನೋದರ ಬಗ್ಗೆ ಪಾಲಿಕೆ ಅಧಿಕಾರಿಗಳು ರೀ ಅಸೆಸ್ಮೆಂಟ್ ಮಾಡಬೇಕು ಅಲ್ಲಿಯವರೆಗೆ ದಂಡ ವಸೂಲಿ ಮಾಡುವದನ್ನು ತಡೆಯುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು
ಒಂದು ಮನೆಯಲ್ಲಿ ನೇಕಾರ ಕುಟುಂಬ ವಾಸವಾಗಿ ಅದೇ ಮನೆಯಲ್ಲಿ ಮಗ್ಗ ಹಾಕಿಕೊಂಡರೆ ಅಂಥಹ ನೇಕಾರರನ್ನು ಕಮರ್ಷಿಯಲ್ ಎಂದು ಪರಿಗಣಿಸಬೇಡಿ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು
ಮಾಜಿ ಶಾಸಕ ಅಭಯಪಾಟೀಲ ಮಾತನಾಡಿ ನೇಕಾರರು ಸಂಕಷ್ಟದಲ್ಲಿದ್ದಾರೆ ಅವರಿಂದ ದಂಡ ವಸೂಲಿ ಮಾಡಬೇಡಿ ದಂಡ ರದ್ದು ಮಾಡಿ ತೆರಿಗೆ ಮಾತ್ರ ವಸೂಲಿ ಮಾಡಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು