ಬೆಳಗಾವಿ- ರಾಜ್ಯದಲ್ಲಿ ಹದಿನೇಳು ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಇದ್ದು ಹಂತ ಹಂತವಾಗಿ ಎಲ್ಲ ಕೇಂದ್ರಗಳನ್ನು ಸ್ಥಾಪಿಸಲಾಗುವದು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ದ್ಯಾನೇಶ್ವರ ಮುಳೆ ಹೇಳಿದರು
ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ವನ್ನು ಸೇವೆಗೆ ಸಮರ್ಪಿಸಿ ಮಾತನಾಡಿದ ಅವರು ದೇಶದ ಪ್ರತಿಯೊಬ್ಬ ಪ್ರಜೆ ಪಾಸ್ ಪೋರ್ಟ್ ಹೊಂದಬೇಕು ಎನ್ನುವದು ರಾಷ್ಟ್ರಪತಿಗಳ ಅಭಿಲಾಷೆಯಾಗಿದೆ ಅದಕ್ಕಾಗಿ ಶರವೇಗದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತದೆ ಮೈಸೂರಿನಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಆರಂಭವಾಗಿದ್ದು ಬೆಳಗಾವಿ ಪಾಸ್ ಪೋರ್ಟ ಕೇಂದ್ರ ರಾಜ್ಯದ ಎರಡನೇಯ ಕೇಂದ್ರವಾಗಿದ್ದರೂ ಉತ್ತರ ಕರ್ನಾಟಕದಲ್ಲಿ ನೂತನವಾಗಿ ತೆರೆದ ಮೊದಲನೇಯ ಪಾಸ್ ಪೋರ್ಟ ಕೇಂದ್ರವಾಗಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ದ್ಯಾನೇಶ್ವರ ಮುಳೆ ಹೇಳಿದರು
ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸಿದರೆ ಸಾಲದು ಬೆಳಗಾವಿ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ವೀಸಾ ಕೇಂದ್ರವನ್ನೂ ತೆರೆಯಬೇಕು ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಚಿಕ್ಕೋಡಿ ಜಿಲ್ಲೆ ಘೋಷಣೆಯಾದ ಬಳಿಕ ಚಿಕ್ಕೋಡಿಯಲ್ಲಿಯೂ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಪ್ರಕಾಶ ಹುಕ್ಕೇರಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ಮುಂದಿಟ್ಟರು
ಸಂಸದ ಸುರೇಶ ಅಂಗಡಿ ಮಾತನಾಡಿ ಪ್ರಕಾಶ ಹುಕ್ಕೇರಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಕನಸು ಕಾಣುವದನ್ನು ಕೈಬಿಡಬೇಕು ಬೆಳಗಾವಿ ರಾಜ್ಯದ ದೊಡ್ಡ ಜಿಲ್ಲೆಯಾಗಿ ಉಳಿಯಬೇಕು ಎನ್ನುವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧದ ನಿರ್ಮಾಣ ಮಾಡಲಾಗಿದೆ ಚಿಕ್ಕೋಡಿಗೆ ಬೇಕಾದರೆ ವಿವಿಧ ಇಲಾಖೆಗಳ ಜಿಲ್ಲಾ ಕಚೇರಿಗಳನ್ನು ಮಂಜೂರು ಮಾಡಿಕೊಳ್ಳಲಿ ಎಂದು ಸುರೇಶ ಅಂಗಡಿ ಪ್ರಕಾಶ ಹುಕ್ಕೇರಿ ಅವರಿಗೆ ಸಲಹೆ ನೀಡಿದ್ರು
ಪ್ರಧಾನ ಅಂಚೆ ಕಚೇರಿಯವರು ಕಚೇರಿ ಎದುರಿನ ಸರ್ಕಲ್ ಗೆ ಪೋಸ್ಟಮನ್ ಸರ್ಕಲ್ ಎಂದು ನಾಮಕರಣ ಮಾಡಿ ಸರ್ಕಲ್ ನಲ್ಲಿ ಪೋಸ್ಟಮ್ಯಾನ್ ಪ್ರತಿಮೆ ನಿರ್ಮಿಸುವ ಬೇಡಿಕೆ ಇಟ್ಟಿದ್ದು ಅದನ್ನು ಆದಷ್ಟು ಬೇಗ ಈಡೇರಿಸಲಾಗುವದು ಪೋಸ್ಟ್ ಆಫೀಸ್ ಎದುರಿನ ರಸ್ತೆಗೆ ಪೋಸ್ಟ ಆಫೀಸ್ ರಸ್ತೆ ಎಂದು ಹೆಸರಿಡಲು ಕ್ರಮ ಕೈಗೊಳ್ಳಲಾಗುವದು ಎಂದು ಸುರೇಶ ಅಂಗಡಿ ಭರವಸೆ ನೀಡಿದರು
ಪ್ರಭಾಕರ ಕೋರೆ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು