ಬೆಳಗಾವಿ- ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನ ಮಂಡಲದ ಅಧಿವೇಶನ ನಡೆಸಿ ಗಡಿನಾಡ ಗುಡಿಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನತೆಯ ವಿರುದ್ಧ ಸೆಟಕೊಂಡ್ರಾ….? ಎನ್ನುವ ಪ್ರಶ್ನೆ ಈಗ ಉತ್ತರ ಕರ್ನಾಟಕದ ಜನತೆಯನ್ನು ಕಾಡುತ್ತಿದೆ.
ಬೆಳಗಾವಿ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಾ ಏಕಿ ಬೆಳಗಾವಿ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದು ಜಿಲ್ಲೆಯ ಜನರಿಗೆ ದಿಗ್ಭ್ರಮೆಯಾಗಿದೆ
ಉತ್ತರ ಕರ್ನಾಟಕದ ಮಠಾಧೀಶರು ಬೆಳಗಾವಿಯ ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಧರಣಿ ನಡೆಸಿದ ಸಂಧರ್ಭದಲ್ಲಿ ಸಿಎಂ ಕುಮಾರಸ್ವಾಮಿ ಒಟ್ಟು ಹತ್ತು ಕಚೇರಿಗಳನ್ನು ಸ್ಥಳಾಂತರ ಮಾಡುವ ವಾಗ್ದಾನ ಮಾಡಿದ್ದರು ಆದರೆ ಈ ವಿಷಯ ಬಜೆಟ್ ನಲ್ಲಿ ಪ್ರಸ್ತಾಪಿಸದೇ ಇರುವದರಿಂದ ಗಡಿನಾಡ ಗುಡಿಯಲ್ಲಿ ನಿರಾಶೆ ಮನೆ ಮಾಡಿದೆ
ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಅಭಿವೃಧಧಿಗೆ ದಿಕ್ಸೂಚಿ ಆಗಬೇಕು ಈ ಶಕ್ತಿ ಸೌಧ ನಿರಂತರ ಕ್ರಿಯಾಶೀಲವಾಗಬೇಕು ಎನ್ನುವದು ಇಲ್ಲಿಯ ಜನರ ಮಹಾದಾಸೆಯಾಗಿದೆ ಆದರೆ ಇದು ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೂ ಪ್ರಸ್ತಾಪವಾಗದೇ ಇರುವದು ದುರ್ದೈವದ ಸಂಗತಿಯಾಗಿದೆ
ಬೆಳಗಾವಿ ಜಿಲ್ಲೆ ಈಗ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಿದೆ 14 ತಾಲ್ಲೂಕುಗಳನ್ನು 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೃಹತ್ತ ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಚಿಕ್ಕೋಡಿ ಅಥವಾ ಗೋಕಾಕ್ ಹೊಸ ಜಿಲ್ಲೆಯಾಗಬೇಕು ಎನ್ನುವ ಕೂಗು ಬಹುದಿನಗಳಿಂದ ಕೇಳಿ ಬರುತ್ತಿದೆ ಆದರೆ ಜಿಲ್ಲಾ ವಿಭಜನೆಯ ವಿಚಾರವೂ ಬಜೆಟ್ ನಲ್ಲಿ ಪ್ರಸ್ತಾಪ ಆಗದೇ ಇರುವದು ದೊಡ್ಡ ದುರಂತ
ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದನ್ನು ಮಾಡಲಿಲ್ಲ ಕೇಳಿದ್ದನ್ನು ಕೊಡಲೇ ಇಲ್ಲ ಈ ಸಾಲಿನ ಬಜೆಟ್ ಬೆಳಗಾವಿ ಪಾಲಿಗೆ ಖಾಲಿ ಬಕೆಟ್ ಆಯ್ತಲ್ಲಾ ಎನ್ನುವದು ಗಡಿ ಕನ್ನಡಿಗರ ನೋವಾಗಿದೆ
ಬೆಳಗಾವಿಯ ಸುವರ್ಣ ವಿಧಾನ ಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ ಆಗಬೇಕಾದರೆ ಪ್ರಮುಖ ಕಚೇರಿಗಳು ಇಲ್ಲಿಗೆ ಶಿಪ್ಟ ಆಗಲೇ ಬೇಕು ಈ ಕುರಿತು ಸರ್ಕಾರವನ್ನು ಒತ್ತಾಯಿಸಿ ಜನಾಂದೋಲನ ನಡೆಯಲಿ