ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಲವಾರು ಬೇಡಿಕೆಗಳ ನಿವಾರಣೆಗೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆ ನಿಯೋಗ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂಮ್ ಪರ್ವೇಜ್ ಅವರನ್ನು ಭೇಟಿ ಮಾಡಿ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ಮಾಡಿತು
ಬೆಳಗಾವಿ ಮಹಾನಗರ ಪಾಲಿಕೆಯ ಸಿಬ್ಬಂಧಿಗಳ ಮತ್ತು ಅಧಿಕಾರಿಗಳ ಸಂಬಳವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆ ಇದನ್ನು ನಗರಾಭವೃದ್ಧಿ ಇಲಾಖೆಯಿಂದಲೇ ಭರಿಸಬೇಕು
ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಉಳಿದಿರುವ ಕೌನ್ಸಿಲ್ ಸಕ್ರೇಟ್ರಿ ಹುದ್ದೆ ಮತ್ತು ಆರೋಗ್ಯ ಅಧಿಕಾರಿ ಹುದ್ದೆ ಮತ್ತು ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು
ಬೆಳಗಾವಿ ಮಹಾನಗರ ಪಾಲಿಕೆಯ ಅನೇಕ ಖುಲ್ಲಾ ಜಾಗೆಗಳಿದ್ದು ಈ ಜಾಗಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ ನಿರ್ಮಿಸುವ ಪ್ರಸ್ತಾವನೆ ಗಳಿಗೆ ತಕ್ಷಣ ಮಂಜೂರಾತಿ ಕೊಡಬೇಕು
ತುರ್ತಾಗಿ ಮರಾಠಾ ಮಂದಿರದ ಜಾಗೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಕೂಡಲೇ ಅನುದಾನ ಮಂಜೂರು ಮಾಡಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ನಿಯೋಗ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂಮ್ ಪರ್ವೇಜ್ ಅವರಲ್ಲಿ ಮನವಿ ಮಾಡಿಕೊಂಡಿದೆ
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಂಜುಮ್ ಪರ್ವೇಜ್ ಶಾಪಿಂಗ್ ಕಾಂಪ್ಲೆಕ್ಸಗಳ ಪ್ರಸ್ತಾವನೆ ಗಳಿಗೆ ಮಂಜೂರಾತಿ ಕೊಡುವ ಜೊತೆಗೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವದು ಎಂದು ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂದು ನಿಯೋಗ ಬೆಳಗಾವಿ ಸುದ್ಧಿಗೆ ಮಾಹಿತಿ ನೀಡಿದ್ದಾರೆ
ಜನೇವರಿ ಮೊದಲ ವಾರದಲ್ಲಿ ಬೆಳಗಾವಿ ಪಾಲಿಕೆಗೆ ಭೇಟಿ ನೀಡಿ ಪಾಲಿಕೆಯ ಪ್ರಗತಿ ಪರಶೀಲನೆ ನಡೆಸುವದಾಗಿ ಅಂಜುಂಮ್ ಪರ್ವೇಜ್ ಪಾಲಿಕೆ ನಿಯೋಗ ಕ್ಕೆ ತಿಳಿಸಿದ್ದಾರೆ
ನಿಯೋಗದಲ್ಲಿ ಹಿರಿಯ ನಗರಸೇವಕ ರಮೇಶ ಸೊಂಟಕ್ಕಿ ಕಿರಣ ಸೈನಾಯಕ ರತನ ಮಾಸೇಕರ ಭೈರಗೌಡ ಪಾಟೀಲ ರಮೇಶ ಕಳಸಣ್ಣವರ ಮತ್ತು ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ನಿಯೋಗದಲ್ಲಿದ್ದರು