ಬೆಳಗಾವಿ – ಕುಂದಾನಗರಿಯಲ್ಲಿ ಸುರಿದ ಮಹಾ
ಮಳೆಗೆ ಯುವಕನೊಬ್ಬ ಬಲಿಯಾಗಿದ್ದಾನೆ ಬೆಳಗಾವಿಯ ಬೂತರಾಮನಹಟ್ಟಿ ಬಳಿ ಹರಿದು ಬಂದ ಹಳ್ಳದಲ್ಲಿ ಇಬ್ಬರು ಸಹೋದರರು ಕೊಚ್ಚಿಹೋಗಿ ಒಬ್ಬನು ಪಾರಾಗಿ ಇನ್ನೊಬ್ಬ ಸಹೋದರ ಮಳೆಯ ಅರ್ಭಟಕ್ಕೆ ಬಲಿಯಾಗಿದ್ದಾನೆ
ಭೂತರಾಮಟ್ಟಿಯ ಸಮೀಪ ಇಬ್ಬರು ಸಹೋದರರು ದಾಟುವಾಗ ಮಳೆ ಬಂದಿದೆ ಮರದ ಕೆಳಗೆ ಆಶ್ರಯಪಡೆದು ನಿಂತಿರುವಾಗ ದಿಬ್ಬದಿಂದ ರಬಸದಿಂದ ನೀರು ಹರಿದು ಬಂದಿದೆ ನೀರಿನಲ್ಲಿ ಇಬ್ಬರೂ ಸಹೋದರರು ಕೊಚ್ಚಿ ಹೋಗಿದ್ದು ಒಬ್ಬ ಸಹೋದರ ಬಚಾವ್ ಆಗಿದ್ದು ಇನ್ನೊಬ್ಬ ಬಲಿಯಾಗಿದ್ದಾನೆ
ನೀರನಲ್ಲಿ ಕೊಚ್ಚಿಕ್ಕೊಂಡು ಹೋಗಿದ್ದ ಇಮ್ರಾನ್ ನದಾಪ್ ಶವ ಪತ್ತೆಯಾಗಿದೆ ಮರದ ಪೋದೆಗೆ ಸಿಲುಕಿದ ಅಮಿರ ಎಂಬಾತನನ್ನು ಸಾರ್ವಜನಿಕರು ರಕ್ಷಿಸಿದ್ದಾರೆ ಅಮಿರಗೆ ಹಗ್ಗ ಹಿಡಿದು ರಕ್ಷಣೆ ಮಾಡಲಾಗಿದೆ
ಹುಕ್ಕೆರಿ ತಾಲೂಕಿನ ಕೊಟಬಾಗಿ ಇಂದ ಇಬ್ಬರು ಸಹೋದರರು ಬೆಳಗಾವಿಗೆ ತೆರಳ್ತುತ್ತಿದ್ದಾಗ ಘಟನೆ ನಡೆದಿದೆ ಬೈಪಾಸ್ ರಸ್ತೆ ಮೇಲೆ ಹಳ್ಳದಂತೆ ಹರಿದ ಮಳೆ ನೀರು. ಈ ನೀರಿನ ರಭಸಕ್ಕೆ ಸಿಲುಕಿ ಇಮ್ರಾನ್ ಸಾವನ್ನೊಪ್ಪಿದ್ದಾನೆ
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಕಾಕತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ