ಬೆಳಗಾವಿ- ದೇಶದಲ್ಲಿ ಇದೀಗ ಎಲ್ಲಾ ಕಡೆಗಳಲ್ಲಿ ಬೆಳಕಿ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ನಿಮಿತ್ತ ಲಕ್ಷ್ಮೀ ಪೂಜೆ, ಪಟಾಕಿ ಸದ್ದು, ದೀಪಗಳ ಬೆಳಕು ಎಲ್ಲೆಡೆ ಮನೆ ಮಾಡಿದೆ. ಆದರೇ ಬೆಳಗಾವಿಯಲ್ಲಿ ದೀಪಗಳ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇಲ್ಲಿ ನಡೆಯುವ ಎಮ್ಮೆಗಳ ಓಟ ಎಲ್ಲರನ್ನು ಸೆಳೆಯುತ್ತದೆ. ಎನಿದು ಎಮ್ಮೆಗಳ ಓಟ ಅಂತರಾ ಈ ಸ್ಟೋರಿ ಓದಿ ಎಂಜಾಯ್ ಮಾಡಿ
ಹೀಗೆ ರಸ್ತೆಯ ಬದಿಯಲ್ಲಿ ವಾದ್ಯ ಮೇಳದೊಂದಿಗೆ ಓಟವನ್ನು ನಿರೀಕ್ಷಿಸುತ್ತ ನಿಂತಿರುವ ಜನ… ಮತ್ತೊಂದು ಭರ್ಜರಿ ಓಟಕ್ಕೆ ಸಿದ್ದಗೊಳ್ಳುತ್ತಿರುವ ಎಮ್ಮೆಯಗಳು. ಯೆಸ್ ಇದು ದೀಪಾವಳಿ ಹಬ್ಬದ ನಿಮಿತ್ತ ಕುಂದಾ ನಗರಿ ಬೆಳಗಾವಿಯಲ್ಲಿ ನಡೆಯೋ ವಿಶೇಷ ಆಚರಣೆಯ ಝಲಕ್… ಕಪ್ಪು ಬಟ್ಟೆ ಹಿಡಿದು ಬೈಕ್ ಹತ್ತಿ ಓಡುತ್ತಿರುವ ವ್ಯಕ್ತಿ. ಬೈಕ್ ಬೆನ್ನತ್ತಿದ ಸಿಂಗಾರಗೊಂಡ ಎಮ್ಮೆ… ಇದು ಬೆಳಗಾವಿಯ ಕೊನ್ವಾಳ ಗಲ್ಲಿಯಲ್ಲಿ ಗೌಳಿ ಸಮಾಜದ ಜನ ಪ್ರತಿವರ್ಷ ಆಯೋಜನೆ ಮಾಡೋ ಎಮ್ಮೆಗಳ ಓಟದ ದೃಶ್ಯಗಳು. ವರ್ಷವಿಡಿ ಹೈನುಗಾರಿಕೆಯಲ್ಲಿ ಬ್ಯೂಸಿಯಾಗಿರೋ ಗೌಳಿ ದೀಪಾವಳಿಯನ್ನು ವಿಜೃಂಭಣೆಯಿಂದ ಸಂಭ್ರಮಿಸುತ್ತಾರೆ. ತಮ್ಮ ಪಾಲಿನ ಲಕ್ಷ್ಮೀ ಯಾದ ಎಮ್ಮೆಗಳಿಗೆ ಕೊಡಿಗೆ ಬಣ್ಣ ಬಳಿದು, ಕವಡೆ ಸರ, ಬಾಸಿಂಗ ಹಾಗೂ ನವಿಲು ಗರಿಯನ್ನು ಯಿಂದ ಅಲಂಕರಿಸುತ್ತಾರೆ. ನಂತರ ತಮ್ಮ ಬಡಾವಣೆಯಲ್ಲಿ ಕಪ್ಪು ಬಣ್ಣದ ಬಟ್ಟೆ ಹಿಡಿದು ಮುಂದೆ ಬೈಕ್ ಮೇಲೆ ವ್ಯಕ್ತಿಗಳು ಓಡುತ್ತಾರೆ. ಅವರ ಹಿಂದೆ ಎಮ್ಮೆಗಳು ಓಡುತ್ತವೆ. ಈ ದೃಶ್ಯಗಳು ತುಂಬ ರೋಚಕವಾಗಿದ್ದು, ಇಡೀ ಬಡಾವಣೆ ಮತ್ತು ಸುತ್ತಮತ್ತಲ ಜನ ಈ ಎಮ್ಮೆಗಳ ರೆಸ್ ನೋಡಲು ಇಲ್ಲಿಗೆ ಬಂದು ಸೇರುತ್ತಾರೆ
ಬೆಳಗಾವಿಯ ಗೌಳಿ ಗಲ್ಲಿ, ಕೊನ್ವಾಳ ಗಲ್ಲಿ, ಶುಕ್ರವಾರ ಪೇಠೆ ಮತ್ತು ಕ್ಯಾಂಪ್ ಬಡಾವಣೆಯಲ್ಲಿ ಮನೆಗೆ 25 ರಿಂದ 30 ಎಮ್ಮೆಗಳು ಇವೆ. ಎಲ್ಲಾ ಎಮ್ಮಗಳನ್ನು ಒಂದೇ ಸೇರಿಕೊಂಡು ಎಮ್ಮೆಗಳ ಓಟವನ್ನು ಆಯೋಜನೆ ಮಾಡಲಾಗುತ್ತದೆ. ಮೊದಲು ಒಂದೊಂದೆ ಎಮ್ಮೆಗಳನ್ನು ಓಡಿಸಲಾಗುತ್ತದೆ. ನಂತರ ಗುಂಪು ಗುಂಪಾಗಿ ಎಮ್ಮೆಗಳನ್ನು ಬಡಾವಣೆಯಲ್ಲಿ ಓಡಿಸುವ ದೃಶ್ಯ ನೋಡಲು ರಸ್ತೆಯ ಬದಿಯಲ್ಲಿ ನೂರಾರು ಜನ ನಿಂತು ನೋಡಿ ಖುಷಿ ಪಡುತ್ತಾರೆ. ಕಳೆದ ನೂರಾರು ವರ್ಷಗಳ ಈ ರೀತಿಯ ಆಚರಣೆಗೆ ಬೆಳಗಾವಿಯಲ್ಲಿ ನಡೆಯುತ್ತದೆ. ಈ ಪರಂಪರೆಯನ್ನು ನಾವು ಮುಂದುವರೆಸಿದ್ದೇವೆ ಎನ್ನುತ್ತಾರೆ ಗೌಳಿ ಸಮಾಜದ ಮುಖಂಡ.
ಒಟ್ಟಾರೆಯಾಗಿ ರಾಷ್ಟ್ರಾದ್ಯಂತ ದೀಪವಾಳಿ ಹಬ್ಬವನ್ನು ಪಟಾಕಿ, ದೀಪಗಳ ಅಲಂಕಾರದಿಂದ ಆಚರಣೆ ಮಾಡೋದು ಸಾಮಾನ್ಯವಾಗಿದೆ. ಆದರೇ ಕುಂದಾ ನಗರಿ ಬೆಳಗಾವಿಯಲ್ಲಿ ಮಾತ್ರ ಎಮ್ಮೆಗಳ ಓಟದ ಮೂಲಕ ಗೌಳಿ ಜನ ಇಂದು ತಮ್ಮ ನಿತ್ಯದ ಕೆಲಸ ಒತ್ತಡ ಮರೆತು ಹಬ್ಬವನ್ನು ವಿಭೀನ್ನವಾಗಿ ಆಚರಣೆ ಮಾಡಿದ್ದು ಮಾತ್ರ ಎಲ್ಲರ ಗಮನ ಸೆಳೆಯಿತು.