ಬೆಳಗಾವಿ- ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರುದ್ರ ನರ್ತನ ಮುಂದುವರೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 11 ಪಾಸಿಟೀವ್ ಕೇಸ್ ಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 85 ಕ್ಕೇರಿದೆ
ಇಂದು ಶುಕ್ರವಾರದ ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಈ ಬುಲಿಟೀನ್ ಬೆಳಗಾವಿ ಜಿಲ್ಲೆಗೆ ಆಘಾತ ನೀಡಿದೆ.ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ತಾಂಡವ ಮುಂದುವರೆದಿದ್ದು ಇಂದು ಒಂದೇ ದಿನ ಈ ಗ್ರಾಮದಲ್ಲಿ 10 ಜನ ಸೊಂಕಿತರು ಪತ್ತೆಯಾಗಿದ್ದಾರೆ.ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ ಸೊಂಕಿತರ ಸಂಖ್ಯೆ 47 ಕ್ಕೆ ತಲುಪಿದೆ.
ಇಂದು ರಾಯಬಾಗ ಕುಡಚಿಯ ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಈ ಗ್ರಾಮದಲ್ಲಿ ಸೊಂಕಿತರ ಸಂಖ್ಯೆ 19 ಕ್ಕೆ ತಲುಪಿದೆ .
ಬೆಳಗಾವಿ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕೊರೋನಾ ವೈರಸ್ ಹತೋಟಿಗೆ ಬಂದಿದ್ದು ಹಿರೇಬಾಗೇವಾಡಿ ಮತ್ತು ರಾಯಬಾಗ ಕುಡಚಿಯಲ್ಲಿ ಮಹಾಮಾರಿ ಕೊರೋನಾ ಠಿಖಾನಿ ಹೂಡಿದ್ದು ಈ ಎರಡೂ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ವೈರಸ್ ಕಮ್ಯುಮಿಟಿ ಸ್ಪ್ರೆಡ್ ಆಗ್ತಾ ಇರೋದು ಆತಂಕಕಾರಿ ಬೆಳವಣಿಗೆಯಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 36 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.