ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲೊಂದು ವಿಚಿತ್ರ ಬಲೂನ ಹಾರಿ ಬಂದಿದೆ.ಈ ಬಲೂನ್ ಅನೇಕ ಅನುಮಾನಗಳಿಗೆ ಕಾರಣವಾಗಿದೆ.ಬಲೂನ ನೋಡಿ ಆತಂಕದಲ್ಲಿರುವ ಗ್ರಾಮಸ್ಥರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ತಾಲೂಕಿನ ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರ ಬಲೂನ್ ಪತ್ತೆಯಾಗಿದೆ.ಎಲ್ಲಿಂದ ಬಂದಿದೆ, ಯಾವಾಗ ಹಾರಿ ಬಂದಿದೆ ಎಂದು ಇನ್ನೂ ಮಾಹಿತಿ ಸಿಕ್ಕಿಲ್ಲ
ಪತ್ತೆಯಾದ ಬಲೂನಲ್ಲಿ ಕೆಲವು ಎಲೆಕ್ಟ್ರಿಕಲ್ ಡಿವೈಸ್ ಪತ್ತೆಯಾಗಿವೆ.ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕಸ್ಥಳಕ್ಕೆ ಆಗಮಿಸಿದ ಪೊಲೀಸರು. ಬಲೂನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ USAನಲ್ಲಿ ಚೈನೀಸ ಸ್ಪೈ ಬಲೂನ್ ಸದ್ದು ಮಾಡಿತ್ತು.ಅದೇ ಮಾದರಿಲ್ಲಿ ಪತ್ತೆಯಾಗಿರುವ ಬಲೂನ್ ಇರಬಹುದೆಂಬ ಗ್ರಾಮಸ್ಥರ ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ