ಉಚಿತ ವಿದ್ಯುತ್ ಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರ
ಬೆಳಗಾವಿ-
ಕರ್ನಾಟಕ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಆದೇಶ ಹೊರಡಿಸಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಸೇರಿತ್ತು. ಇದೀಗ ಗೃಹಜ್ಯೋತಿ ಯೋಜನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಜುಲೈ ತಿಂಗಳ ವಿದ್ಯುತ್ ಬಿಲ್ನಿಂದ ಈ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಆದರೆ ಈ ಯೋಜನೆಯ ಫಲಾನುಭವಿಯಾಗಲು ಕಾಂಗ್ರೆಸ್ ಸರಕಾರ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಮೇ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯ ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ಗಳವರೆಗೆ ಉಚಿತವಾಗಿ ಸಿಗಲಿದೆ. ಆದರೆ ಗ್ರಾಹಕರ ಮಾಸಿಕ ಸರಾಸರಿಯ ಬಳಕೆಯ ಯೂನಿಟ್ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಗೆ ಅನುಮತಿ ನೀಡಲಾಗಿದೆ. ಒಂದು ವೇಳೆ 200 ಯೂನಿಟ್ ಮೀರಿ ಬಳಸುವವರು ಸಂಪೂರ್ಣ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಷರತ್ತುಗಳು
ಈ ಯೋಜನೆ ಗೃಹ ಬಳಕೆಗೆ ಮಾತ್ರ ಅನ್ವಯವಾಗುತ್ತದೆ, ವಾಣಿಜ್ಯ ಉದ್ದೇಶಕ್ಕೆ ಈ ಯೋಜನೆ ಅನ್ವಯವಾಗುವುದಿಲ್ಲ.
ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಅನ್ನು ನಮೂದಿಸುವುದು
ನಿಗದಿತ ಬಿಲ್‌ಗಿಂತ ಹೆಚ್ಚಿನ ಬಳಕೆಯಾದರೆ, ಗ್ರಾಹಕರಿಗೆ ಹೆಚ್ಚುವರಿ ಬಳಕೆಯಾದ ಯೂನಿಟ್ಗೆ ಬಿಲ್ ಕೊಡಲಾಗುತ್ತದೆ. ಇದನ್ನು ಗ್ರಾಹಕರು ಪಾವತಿಸಬೇಕು
ನಿಗದಿತ ಯೂನಿಟ್ ಮಾತ್ರ ಬಳಸಿದರೂ ಮಾಸಿಕ ಬಿಲ್ ಬರುತ್ತದೆ, ಆದರೆ ಬಿಲ್ ಕಟ್ಟುವಹಾಗಿಲ್ಲ, ಅದರಲ್ಲೂ ಶೂನ್ಯಬಿಲ್ ನೀಡಲಾಗಯತ್ತದೆ.
ಈ ಯೋಜನೆ ಪಡೆಯಲು ಬಯಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
ಪ್ರತಿ ಫಲಾನುಭವಿಗಳು ತಮ್ಮ ಕಸ್ಟಮರ್ ಐಡಿ/ ಅಕೌಂಟ್ ಐಡಿಯನ್ನು ಆಧಾರ್ ನಂಬರ್ಗೆ ಜೋಡಿಸುವುದು ಕಡ್ಡಾಯ
ಸದ್ಯ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳು ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳ್ಳಲಿದೆ
ಜೂನ್ ತಿಂಗಳವರೆಗಿನ ಬಿಲ್ ಬಾಕಿ, ಇನ್ನಿತರ ಬಾಕಿ ಇದ್ದರೆ ಮೂರು ತಿಂಗಳ ಒಳಗಾಗಿ ಪಾವತಿ ಮಾಡಬೇಕು
200 ಯೂನಿಟ್ ಪಡೆಯುವ ಫಲಾನುಭವಿಗಳ ಮೀಟರ್ ರೀಡಿಂಗ್ ಕಡ್ಡಾಯ
ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಅನ್ವಯ.
ಇನ್ನೂ ಗ್ರಾಹಕರಿಗೆ
ವಿದ್ಯುತ್ ಸರಬರಾಜು ಮಾಡುವ ನಿಗಮಗಳಿಗೆ ಸರ್ಕಾರದಿಂದ ಸಹಾಯಧನದ ರೂಪದಲ್ಲಿ ಪಾವತಿಸಲಾಗುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.