ಲಾಕ್ ಡೌನ್: 794 ಅಬಕಾರಿ ದಾಳಿ- ಮದ್ಯ, ವಾಹನ ಸೇರಿದಂತೆ 1.10 ಕೋಟಿ ಮೌಲ್ಯದ ವಸ್ತು ಜಪ್ತಿ
ಬೆಳಗಾವಿ, ಏ.೨೭(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ
ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು
ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ.
ದಿನಾಂಕ 24-03-2020 ರಿಂದ ಇಲ್ಲಿಯವರೆಗೆ
ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು- ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ,
ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿರುತ್ತದೆ.
ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ
ಇಲ್ಲಿಯವರೆಗೆ ಒಟ್ಟು 794 ದಾಳಿಗಳನ್ನು ನಡೆಸಿ, 108 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 64
ಆರೋಪಿಗಳನ್ನು ಬಂಧಿಸಿ 4662.695 ಲೀಟರ್ ಮದ್ಯ, 95.900 ಲೀಟರ್ ಗೋವಾ ಮದ್ಯ, 10.170
ಲೀಟರ್ ಮಹಾರಾಷ್ಟ್ರ ಮದ್ಯ, 1207.200 ಲೀಟರ್ ಬೀಯರ್, 53 ಲೀಟರ್ ಸೇಂಧಿ, 170 ಲೀಟರ್ ಬೆಲ್ಲದ
ಕೊಳೆ, 79.610 ಲೀಟರ್ ಸಂತ್ರಾ, 93 ಲೀಟರ್ ಕಾಜು, 1714,400 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು, 50ಕೆ.ಜಿ.ಬೆಲ್ಲ ಹಾಗೂ 7.400 ವೈನ್ ವಶಪಡಿಸಿಕೊಳ್ಳಲಾಗಿರುತ್ತದೆ.
79 ದ್ವಿಚಕ್ರ ವಾಹನ, 02 ಆಟೋ ರಿಕ್ಷಾ, 2 ಕಾರ್, 04 ಗೂಡ್ಸ್ ವಾಹನ, 1 ಮಹೇಂದ್ರ ಪಿಕಪ್ (ಒಟ್ಟು 88 ವಾಹನಗಳ ಅಂದಾಜು ಮೌಲ್ಯ 52 ಲಕ್ಷ ) ಮತ್ತು ಮದ್ಯ, ಬೀಯರ್ ಹಾಗೂ ಇತರೆ ಅಂದಾಜು ಮೌಲ್ಯ ರೂ. 58 ಲಕ್ಷಗಳು ಆಗುತ್ತದೆ. ಹೀಗೆ ಒಟ್ಟು ರೂ. 1 ಕೋಟಿ 10 ಲಕ್ಷ ಮೌಲ್ಯದ ಮದ್ಯ ಮತ್ತು ಅಕ್ರಮ ಸಾಗಾಣಿಕೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಬಸವರಾಜ್ ತಿಳಿಸಿದ್ದಾರೆ.
*”*